ಸುಮ್ನೆ ಒಂದಷ್ಟು ಕವಿತೆ !
೧) ದಂಗೆ
ದಂಗೆ ಏಳಬೇಕಂತೆ ಮಳೆ ಸುರಿದ ಹಾಗೆ
ಮರಗಳನು ಕಡಿದು ಹೆಚ್ಚುತಿರೆ ಬೇಗೆ
ನಿಂತ ನೀರು ಚಲಿಸಲಿ ಮಳೆ ಮುತ್ತಿನಿಂದ
ಇಷ್ಟೆಲ್ಲಾ ಆದ್ಮೇಲಾದ್ರೂ
ಸೋಲಾರ್ ಉಪಕರಣಗಳ ಬಳಸೋಣ ಕಂದ
……………………………………………………………………..
೨) ಹೊಸತು
ಹೊಸತೆನ್ನುವ ಪದ ಹಳೆಯದೇ
ಹೊಸತನ್ನು ಹುಡುಕುವ ಕ್ರಿಯೆ ಹಳೆಯದೇ
ಏನನ್ನೂ ತಿಳಿಯದೇ
ಯೋಚಿಸುವುದೆಲ್ಲಾ ಹೊಸದೇ
……………………………………………………………………..
೩) ಏಕೆ?
ನೀ ಎದುರಿಗೆ ಸಿಕ್ಕಾಗ ನಾ ತಪ್ಪಿಸಿಕೊಂಡರೂ
ಮತ್ತೆ ನಿನ್ನ ನೋಡಬೇಕೆನಿಸುತ್ತಿದೆಯೇಕೆ?
ನೀ ನನಗೆ ಬಯ್ಯುವಾಗ ನಾ ಸುಮ್ಮನಿದ್ದರೂ
ಮತ್ತೆ ನಿನ್ನ ಮಾತನಾಡಿಸಬೇಕೆನಿಸುತ್ತಿದೆಯೇಕೆ?
ಎಲ್ಲಾದ್ರೂ ನಿನ್ನ ಸಾಲ ಹಿಂತಿರುಗಿಸುವ ಯೋಚನೆ ಬಂತೆ ನನ್ನ ಮನಕೆ?
……………………………………………………………………..
೪) ನಾನು-ನಾಯಿ
ದಾರಿಯಲಿ ಕಂಡಿದ್ದು ಹಸಿದ ನಾಯಿ
ನನ್ನ ಹುಡುಗಿಗೆ ನಾನೇ ಆಗ ಸಿಪಾಯಿ
ಹೋಟೆಲಲಿ ತಿಂದು ತೇಗಿದ್ದು ಅವಳದೇ ಬಾಯಿ
ಈಗ ನಾನು-ನಾಯಿ ಇಬ್ಬರೂ ಬಡಪಾಯಿ
……………………………………………………………………..
೫) ಕರೆ
ಕರೆಯದೇ ಬರೋದು – ಮಳೆ
ಕರೆದಾಗ ಬರೋದು – ನಾಯಿ
ಬರದೇ ಕರೆಯೋದು – ಪೆಟ್ರೋಲ್ ಬಂಕ್
ಬಂದರೂ ಕರೆಯೋದು – ಫೋನ್
……………………………………………………………………..
೬) ನಾಗರೀಕರು
‘ಏಯ್’ ಅಂದನವನು
‘ಏನಲೇ’ ಅಂದನಿವನು
ಶುರುವಾಯಿತು ಹೊಡೆದಾಟ
ಬೀದಿಯಲ್ಲೇ ಎಳೆದಾಟ
ಎಂದೂ ಬರದ ತಂದೆ-ತಾಯಿ ಇಬ್ಬರೂ
ಅವರವರ ಬಾಯಲ್ಲಿ ಬಂದರು
ಇವರೇನಾ ಮನುಷ್ಯರು?
ಮುಂದುವರಿದ ನಾಗರೀಕರು.
……………………………………………………………………..
೭) ಇನ್ಫಿನಿಟಿ
ನೆನಪನ್ನು ನೆನೆಯುತ್ತಾ ನೆನಪೇ ಬರೆಸಿದಾಗ
ಈ ಬರವಣಿಗೆಯೇ ಮುಂದೆಂದೋ ನೆನಪಾದಾಗ
ಆ ನೆನಪು ಮತ್ತೊಮ್ಮೆ ಬರೆಸಿದಾಗ
ಇಲ್ಲ ! ಇದಕ್ಕೆ ಕೊನೆಯಿಲ್ಲ
ಆಂಗ್ಲದ ಇನ್ಫಿನಿಟಿ, ಕನ್ನಡದ ಅನಂತ ಪದಗಳನ್ನು ಇಂತಹ ಸಂದರ್ಭಗಳಿಗಾಗಿಯೇ ಕಂಡುಹಿಡಿದಂತಿದೆ !
……………………………………………………………………..
೮) ಗುರಿ
ಹುಟ್ಟುವುದೆಲ್ಲೋ, ಏನಾಗಿಯೋ ?
ಬೆಳೆಯುವುದೆಲ್ಲೋ, ಯಾರಿಗಾಗಿಯೋ ?
ಸಾಯುವುದೆಲ್ಲೋ, ಯಾಕಾಗಿಯೋ ?
ತಿಳಿಯದೇ ಹೋದರೆ ಜೀವನವೆ ದುಸ್ತರ
ಗುರಿ ಇದ್ದರೊಂದು ತಿಳಿಯುವುದಿದಕುತ್ತರ !
……………………………………………………………………..
೯) ಪ್ರೀತಿ
ರಾತ್ರಿಯೆಲ್ಲ ನೆನೆಯುತಿದ್ದೆ ನಿನ್ನ ಮೊಗವನೆ
ಮೂರು ಹೊತ್ತು ಅರಸುತಿದ್ದೆ ನಿನ್ನ ಮಾತನೆ
ನೀನಿನ್ನೂ ಬರಲಿಲ್ಲ
ಪ್ರೀತಿಯೇ ಸಿಗಲಿಲ್ಲ
……………………………………………………………………..
೧೦) ಕನ್ಫ್ಯೂಶನ್
Silent ಆಗಿ ಇದ್ರೆ ಗೂಬೆ ಅಂದ್ರು
ಜಾಸ್ತಿ ಮಾತಾಡಿದ್ರೆ ಲೂಸು ಅಂದ್ರು
ನೋಡಿದ್ರೆ ಗುರಾಯ್ಸ್ತನೆ ಅಂದ್ರು
ನೋಡಿಲ್ಲ ಅಂದ್ರೆ ಇದುಕ್ಕೆ ಯಾವ್ದ್ರಲ್ಲೂ Interest ಇಲ್ಲ ಅಂದ್ರು
ಸಣ್ಣ Hair cut ಮಾಡ್ಸಿದ್ರೆ ರೌಡಿ ಅಂದ್ರು
ಸ್ವಲ್ಪ ಉದ್ದ ಬಿಟ್ರೆ ಕರಡಿ ಅಂದ್ರು
ಅವರೆಲ್ಲರಿಗೂ ಯಾರೋ ಹಿಂಗೆ ಹೇಳಿರಬೇಕು
ಅದ್ಕೆ ಅವ್ರು ನಮಗೆ ಹೇಳ್ತಾರೆ
……………………………………………………………………..
೧೧) ಯಾಕೆ ಹೀಗೆ?
ಸ್ಪೇನ್ ನ ಗೂಳಿಯಂತೆ ನುಗ್ಗುತ್ತಿದ್ದ ನನ್ನ ಬಾಳಿನಲ್ಲಿ ಎದುರಿಗೆ ನೀ ಕಂಡೆಯಲ್ಲಾ..
ದೂರದಲ್ಲೇ ಇದ್ದರೂ ನೀ ನನ್ನನು ಕಣ್ಣ ಅಂಚಲೇ ನೋಡುವೆ!
ಓಡುತ್ತಲೇ ಇದ್ದ ನಾ ನಿನ್ನ ಮುಂದೇಕೋ ಸುಮ್ಮನೇ ನಿಂತೆನಲ್ಲಾ..
ನಿಂತಂತೆಯೇ ನಿಂತಿದ್ದರೂ, ನಾ ನಿನ್ನ ಹಿಂದೆಯೇ ಓಡುವೆ !!
……………………………………………………………………..
೧೨) ಕೆಲಸ
ಹಾರೋದೊಂದೇ ಹಕ್ಕಿ ಕೆಲಸವಲ್ಲ.
ಹಂಗಂತ ಹಾರದೆ ಇದ್ದರೆ ಹಕ್ಕಿ ಬಹಳ ದಿನ ಬದುಕೋಲ್ಲ !
ಕವಿತೆ ಬರೆಯುವುದೇ ನನ್ನ ಕೆಲಸವಲ್ಲ.
ಹಂಗಂತ ಏನೂ ಬರೆಯದೆ ಸುಮ್ನೆ ಕೂತಿದ್ರೆ ಬೇರೆ ಕೆಲಸವೇ ಮುಂದುವರಿಯೋಲ್ಲ !
……………………………………………………………………..
Superb
Thank you Manu 🙂