Category: ಕಲ್ಪನೆ

Maths Home Work 0

ಗಣಿತದ ಹೋಂ ವರ್ಕ್

ನಾನು ಬೆಳಗ್ಗೆ ಪುಸ್ತಕಗಳನ್ನ ಚೀಲಕ್ಕೆ ತುಂಬುವಾಗಲೇ ನೆನಪಾಗಿದ್ದು, ಇವತ್ತಿಗೆ ಬರೆಯಲು ಹೇಳಿದ್ದ ಗಣಿತ ಹೋಂ ವರ್ಕ್ ಬರೆದಿಲ್ಲ ಅಂತ! ‘ನಿನ್ನೆ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಭಾರತ ಸೋಲೋದನ್ನ ನೋಡೋಕಿಂತ ಹೋಂ ವರ್ಕ್ ಆದ್ರೂ ಮಾಡಿದ್ರೆ ನಾಗರತ್ನ ಟೀಚರ್ ಹತ್ರ ಪೆಟ್ಟು ತಿನ್ನೋದು ಉಳೀತಿತ್ತು’ ಅಂತ ಬೈಕೋತಾ, ಇನ್ನೂ ಲೇಟ್ ಆದ್ರೆ ಬಸ್ ಸಿಗಲ್ಲ ಸ್ಕೂಲಿಗೆ ಹೋಗೋಕೆ ಅನ್ಕೋತಾ ಮನೆಯಿಂದ ಒಂದು ಕಿ.ಮೀ. ದೂರ ಇರುವ ಬಸ್ ಸ್ಟಾಪಿನ ಕಡೆಗೆ...

bangalore-joint-family 0

ಜಾಯಿಂಟ್ ಫ್ಯಾಮಿಲಿ = ಬೆಂಗಳೂರು

ಒಂದು ಊರು. ಅಲ್ಲಿ ಒಂದು ಜಾಯಿಂಟ್ ಫ್ಯಾಮಿಲಿ. ತುಂಬಾ ದೊಡ್ಡ ಮನೆ. ಮನೆಯಲ್ಲಿರುವವರಿಗೆ ಸಹಾಯ ಮಾಡುವ ಗುಣ ಸ್ವಲ್ಪ ಜಾಸ್ತೀನೆ. ನಮ್ಮ ಮನೆಗೆ ಒಳ್ಳೇ ಹೆಸರು ಬರಬೇಕು ಅಂತ, ಬೇರೆ ಊರಿಂದ ಏನೋ ಕೆಲಸದ ಮೇಲೆ ಈ ಊರಿಗೆ ಬರುವವರಿಗೆ ಉಳಿಯಲು ಜಾಗ ಇಲ್ಲ ಅಂತ ಗೊತ್ತಾಗಿ “ಇಲ್ಲೇ ಬನ್ನಿ” ಅಂತ ಆ ದೊಡ್ಡ ಮನೆಯಲ್ಲಿ ತಮ್ಮ ರೂಮನ್ನೇ ಬಿಟ್ಟು ಕೊಟ್ಟವರೆಷ್ಟೋ?! ಅತಿಥಿ ದೇವೋ ಭವ! ಆ ಬೇರೆ ಊರಿಂದ...

imbala 0

​ಹೀಗೊಂದು ಇಂಬಳದ ಕಥೆ !

ಇಲ್ಲಿ ಇರೋ ಬದ್ಲು ಅಲ್ಲಿಗೆ ಹೋದ್ರೆ ಏನಾದ್ರು ಒಂದು ಕೆಲಸ ಸಿಗುತ್ತೆ, ಹೋಗಿ ಹುಡುಕು. ಅಂತ ಮಕ್ಕಳನ್ನ ಬೆಂಗ್ಳೂರಿಗೆ ಕಳಿಸೋ ಅಪ್ಪ-ಅಮ್ಮನ ಥರ ನಮ್ಮೂರಿನ ತೋಟದಲ್ಲಿ ಇರೋ ಇಂಬಳಗಳೂ ತಮ್ಮ ಮಗನನ್ನು ಬೆಂಗ್ಳೂರಿಗೆ ಕಳ್ಸೋ ಪಿಲಾನ್ ಮಾಡಿ ಕರೀ ಶೂ ಹಾಕ್ಕಂಡು ಕೆಂಪು ಬಸ್ ಹತ್ತೋಕೆ ಹೊರಟಿದ್ದ ಒಬ್ಬ ಹುಡುಗನ ಕಾಲಿಗೆ ಹತ್ತಿಸಿ ಟಾಟಾ ಮಾಡಿ ಬಂದ್ವು. ಇತ್ತ ಹುಡುಗನ ಕರೀ ಶೂ, ಕರೀ ಸಾಕ್ಸನ್ನು ದಾಟಿದ ಮರಿ ಇಂಬಳ...

iron box 2

ಐರನ್ ಬಾಕ್ಸ್

ದಿನಾಂಕ 22-12-2014 ರ ಪಂಜುವಿನ ಸಂಚಿಕೆಯಲ್ಲಿ http://www.panjumagazine.com/?p=9586 ~ ಐರನ್ ಬಾಕ್ಸ್ ~ (ಕಾಲ್ಪನಿಕ) ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ ‘ಢಬ್’ ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ...

hu-anbeku 0

ಹೂಂ ಅನ್ಬೇಕು, ಸುಮ್ನೆ ಕಥೆ ಹೇಳಲ್ಲ !

ಏಪ್ರಿಲ್ ೨೮ ೨೦೧೪ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ http://www.panjumagazine.com/?p=7200 -_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_ ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ ‘ಕಥೆ ಹೇಳಿ’ ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ! ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು!...

ootada-hotte 0

ಊಟದ ಹೊಟ್ಟೆ

ಮಧ್ಯಾಹ್ನ ಊಟದ ಟೈಮು, ಸಿಕ್ಕಾಪಟ್ಟೆ ಹಸಿವಾಗ್ತಿದೆ. Empty mind is Devil’s workshop ಅನ್ನೋ ಗಾದೆ ಗೊತ್ತಿತ್ತು, ಆದ್ರೆ ಎಂಟೀ ಹೊಟ್ಟೆಯಿಂದಾನು ತಲೇಲಿ ಇಂಥ ಪೆಕ್ರು ಪೆಕ್ರು ಯೋಚ್ನೆಗಳು ಬರ್ತವೆ ಅಂತ ಗೊತ್ತಿರ್ಲಿಲ್ಲ. ವಿಸ್ಯ ಏನಪ್ಪಾ ಅಂತಂದ್ರೆ, ನಮ್ಮೆಲ್ರಿಗೂ ಇರೋ ಈ ಹೊಟ್ಟೆ ಅನ್ನೋ ಸಿಮೆಂಟ್ ಕಲ್ಸೋ ಮೆಶೀನಿಗೆ ಸಮಯಕ್ಕೆ ಸರಿಯಾಗಿ ಏನಾದ್ರೂ ಒಂದು ಹಾಕಿಲ್ಲಾ ಅನ್ನೋದು ನಮಗೆ ಮಾತ್ರ ಗೊತ್ತಿದ್ರೆ ನಮಗೇ ಸುಸ್ತಾಗುತ್ತೆ, ಊರವ್ರಿಗೆಲ್ಲಾ ಗೊತ್ತಿದ್ರೆ ಸರ್ಕಾರನೂ ಸುಸ್ತಾಗುತ್ತೆ!...

dadda-boogu-kattidaaga 0

ದದ್ದ ಬೂಗು ಕಟ್ಟಿದಾಗ !

ಜುಲೈ-1-2013ರ ‘ಪಂಜು’ ಅಂತರ್ಜಾಲ ವಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ ! http://www.panjumagazine.com/?p=2960 ದದ್ದ ಬೂಗು ಕಟ್ಟಿದಾಗ !   ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್...

modala-sooryodaya 0

ಮೊದಲ ಸೂರ್ಯೋದಯ

ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ http://www.panjumagazine.com/?p=2100 ~ ಮೊದಲ ಸೂರ್ಯೋದಯ ~ (ವಿ.ಸೂ.ಈ ಕಥೆಯಲ್ಲಿ ಬರುವ ಎಲ್ಲಾ ಜಾಗ ಹಾಗೂ ಪಾತ್ರಗಳು ಕೇವಲ ಕಾಲ್ಪನಿಕ!) ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ...

lo-maccha-mattu-kempu-hallu 0

“ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” : ಒಂದು ಕಥೆ

ಮೊನ್ನೆ ಬೆಳಿಗ್ಗೆ ಮುಂಚೆ 5:30 ರ ಸುಮಾರಿಗೆ ಮಲಗಿದವನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಕಾರಣ ಒಂದು ಕೆಟ್ಟ  ಕನಸು! ಆ ಕನಸಿಗೆ, ಎಚ್ಚರವಿರುವಾಗ ಇನ್ನಷ್ಟು ಯೋಚನೆಯನ್ನು ಬೆರೆಸಿ ಈ “ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” ಎಂಬ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಪುರಸೊತ್ತಿದ್ದರೆ ಒಮ್ಮೆ ಓದಿಬಿಡಿ ! “ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” ಟ್ನಿಕ್ ಟಿಕ್ ಟಿಕ್ ಟಿಕ್ ಟ್ನಿಕ್ ಟಿಕ್ ಟಿಕ್ ….. ಟ್ರೀ ಟುಕ್ ಟುಕ್ ಟ್ರೀ...

jeevigalu 1

“ಜೀವಿಗಳು” – ಒಂದು ಕಥೆ

“ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ.” “ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?” “ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ.” “ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?” “ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?” “ಬಿಡಲ್ಲ. ಏನಿವಾಗ?” “ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ...

purule-hakki 1

ಪುರುಳೆ ಹಕ್ಕಿ !

  ನನಗೆ ಈ ಕಥೆಯ ಮೂಲ ಯಾವುದು ಅಂತ ಗೊತ್ತಿಲ್ಲ. ನಾನು ಕೇಳಿದ್ದು ಮಾತ್ರ ೧೬ – ೧೭ ವರ್ಷದವನಾಗಿದ್ದಾಗ ನನ್ನ ಸೋದರಮಾವನಿಂದ. ಅದೂ ಅವರ ಮಗ ಸಣ್ಣವನಿದ್ದಾಗ ನಿದ್ದೆ ಮಾಡಿಸಲು ಹೇಳುವಾಗ ಕದ್ದು ಕೇಳಿಸಿಕೊಂಡಿದ್ದು ! ಇದರ ಸಾರಾಂಶ, ಸಂದೇಶ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇಲ್ಲಿಂದ ಮುಂದೆ ಕಥೆ, ನಾನು ಕೇಳಿಸಿಕೊಂಡಂತೆ, ನನಗೆ ನೆನಪಿದ್ದಂತೆ, ಅದರದೇ ಆದ ಧಾಟಿಯಲ್ಲಿ ! ~~ ಪುರುಳೆ ಹಕ್ಕಿ ~~   ಒಂದು ದೊಡ್ಡ ಕಾಡಲ್ಲಿ...