Category: ಕವಿತೆ
ಕಳೆದ್ಹೋದೆ ಕಳೆದ್ಹೋದೆ!
ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ http://www.panjumagazine.com/?p=7682 ~ ~ ಕಳೆದ್ಹೋದೆ ಕಳೆದ್ಹೋದೆ! ~ ~ ಮರಳ ಮೇಲೆ ಬರೆದರಲೆಯು ತೊಳೆವುದಿಲ್ಲವೇನು? ಎಂದೆನಿಸಿ ಅಲೆಯ ಮೇಲೇ ಬರೆಯಲ್ಹೊರಟೆ ನಾನು ಬರೆದು-ಮುಳುಗಿ, ಬರೆದು-ಮುಳುಗಿ ಕಳೆದ್ಹೋದೆ ಕಳೆದ್ಹೋದೆ! ಬದುಕಬೇಕು, ಬರೆಯಬೇಕು ಎಂದೀಜಿದೆನಲ್ಲ ಮೀನಿಗೋ ನಾನೆ ಹಸಿವು ನನ್ನ ತಿಂದಿತಲ್ಲ! ಉಗುಳಿ-ನುಂಗಿ, ಉಗುಳಿ-ನುಂಗಿ ಕಳೆದ್ಹೋದೆ ಕಳೆದ್ಹೋದೆ! ಮೀನೀಗ ಹಾರುತಿದೆ ಕಡಲ್ಹಕ್ಕಿಯ ಕಾಲಡಿಗೆ! ಸತ್ತ ಮೀನ ಬಾಯ್ತೆರೆದು ಬಂದೆನಾಗ ಹೊರಗೆ ಕಡಲೋ-ನೆಲವೋ, ಕಡಲೋ-ನೆಲವೋ ಕಳೆದ್ಹೋದೆ ಕಳೆದ್ಹೋದೆ!...
ಗಿಳಿರಾಯ
ಮಳೆರಾಯನಾರ್ಭಟಕೆ ಸಿಕ್ಕನೋ ಗಿಳಿರಾಯ ಕಂದನಿಗಾಹಾರ ತರುತಲಿರುವಾಗ ಆಗಿದೆ ಕಾಲಿನಾ ಬುಡದಲ್ಲಿ ಗಾಯ ಹಾರುವುದಕದರಿಂದ ತೊಂದರೆಯು ಈಗ ಕಂದನಾ ನೆನೆಯುತಿರೆ ನೋವೆಲ್ಲ ಮಾಯ ಕತ್ತಲಾ ಸೆರಗಲಿ ಇಮ್ಮಡಿಸಿದೆ ವೇಗ ಇತ್ತಕಡೆ ಮರಿ ಗಿಳಿಗೆ ಗುಡುಗು-ಸಿಡಿಲಿನಾ ಭಯ ಮೈಯೆಲ್ಲ, ಗೂಡೆಲ್ಲ ಒದ್ದೆಯಾ ಭಾಗ ಮಿಂಚೊಂದು ಹೊಂದಿದೆ ಅಂಕು-ಡೊಂಕು ಮೈಯ್ಯ ಗಿಳಿಗೂಡ ಸವರಿತು ತನ್ನಯ ತರಂಗ ತಲುಪಿದನು ತನ ಗೂಡ ನಮ್ಮ ಗಿಳಿರಾಯ ಗೂಡು, ಕಂದಗಳೆರಡು ನೆಲದಲ್ಲಿ ಲಾಗ ಎತ್ತುತಾ ಕಂದನಾ, ಮೀರದೆಯೇ...
ಮೊದಲ ಮಳೆ
ದ್ವೀಪದಲ್ಲೊಂದು ಮರ ಮರದ ಮೇಲೊಂದು ಹಕ್ಕಿ ಹಕ್ಕಿಯ ಬಾಯಲ್ಲಿ ಗೆದ್ದಲು ಗೂಡಿನಲ್ಲುಳಿದ ಗೆದ್ದಳುಗಳಿಗೆ ತಾವು ಉಳಿದೆವೆಂಬ ಖುಷಿ ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ ಮರಕ್ಕೆ ಹಕ್ಕಿ, ಗೆದ್ದಲು ಸೇರಿ ತನ್ನ ತಿಂದಾವೆಂಬ ಭಯ ಇದ್ದಕ್ಕಿದ್ದಂತೆ ಪಟಪಟನೆ ಗೆದ್ದಲು ಗೂಡಿನ ಮೇಲೆ ಬಿದ್ದ ಮಳೆಹನಿ ಗೆದ್ದಲುಗಳಿಗೆ ತಮ್ಮ ಗೂಡು ಹಾಳಾದೀತೆಂಬ ಭಯ ಹಕ್ಕಿಗೆ ತನ್ನ ಮಕ್ಕಳು ಒದ್ದೆ ಆದಾವೆಂಬ ಭಯ ಮರಕ್ಕೆ ತಾನು ಸ್ವತಂತ್ರನಾಗುವೆನೆಂಬ ಖುಷಿ ಮೊದಲ ಮಳೆಯ ಖುಷಿ 🙂
My only SWEETEST HEART
Dedicated to my only SWEETEST HEART,my buddy “Pakru”. I LOVE DOG 🙂 Because he is not like humans ! He lives his life so happily. BITES the 1 who’s irritating him with no mercy. CRIES when he’s alone. Shows his LOVE by licking you. SHOUTS if he don’t like something....
~MY NATIVE~
This was the very First Poem I had written when I heard someone praising our native “Koppa, Chickamagalur, Karnataka, India”. Sorry for Grammatical Mistakes. Read at your own risk ! NATURE IS VERY CALM, JUST LIKE MY MOM! IN A VERY COLD AIR, SIT IN FRONT OF BATHROOM’S...
ಸುಮ್ನೆ ಒಂದಷ್ಟು ಕವಿತೆ !
೧) ದಂಗೆ ದಂಗೆ ಏಳಬೇಕಂತೆ ಮಳೆ ಸುರಿದ ಹಾಗೆ ಮರಗಳನು ಕಡಿದು ಹೆಚ್ಚುತಿರೆ ಬೇಗೆ ನಿಂತ ನೀರು ಚಲಿಸಲಿ ಮಳೆ ಮುತ್ತಿನಿಂದ ಇಷ್ಟೆಲ್ಲಾ ಆದ್ಮೇಲಾದ್ರೂ ಸೋಲಾರ್ ಉಪಕರಣಗಳ ಬಳಸೋಣ ಕಂದ …………………………………………………………………….. ೨) ಹೊಸತು ಹೊಸತೆನ್ನುವ ಪದ ಹಳೆಯದೇ ಹೊಸತನ್ನು ಹುಡುಕುವ ಕ್ರಿಯೆ ಹಳೆಯದೇ ಏನನ್ನೂ ತಿಳಿಯದೇ ಯೋಚಿಸುವುದೆಲ್ಲಾ ಹೊಸದೇ …………………………………………………………………….. ೩) ಏಕೆ? ನೀ ಎದುರಿಗೆ ಸಿಕ್ಕಾಗ ನಾ ತಪ್ಪಿಸಿಕೊಂಡರೂ ಮತ್ತೆ ನಿನ್ನ ನೋಡಬೇಕೆನಿಸುತ್ತಿದೆಯೇಕೆ? ನೀ ನನಗೆ ಬಯ್ಯುವಾಗ...
ಮುದ್ದು ಮುದ್ದು ಅಮ್ಮ :)
ತಡವಾಗಿ ಬಂದಾಗ ಸುಮ್ನಿರ್ತೀಯ. ರೆಟ್ಟೆ ಹಿಡಿದು ‘ಯಾಕೆ ತಡ?’ ಕೇಳೋದಲ್ವ ? ನನ್ನ ತಲೆಗೆ ಎಣ್ಣೆ ಹಾಕಿ ತಟ್ತಿರ್ತೀಯ. ‘ನೀನೆ ಹಾಕ್ಕೋ ಹೋಗು’ ಅಂತ ಬಯ್ಯೋದಲ್ವ? ಬಟ್ಟೆ ಕೊಳೆ ಆದಾಗ ತೊಳೆದು ಹಾಕ್ತಿಯ. ‘ತೊಳಿ’ ಅಂತ ನನ್ನ ಮುಖಕೆ ಎಸೆಯೋದಲ್ವ? ತಿರುಗಿ ಹೋಗುವಾಗ ಮೂಟೆ ತಿಂಡಿ ಕೊಡ್ತಿಯ. ‘ಅಲ್ಲಿ ಹೇಗೂ ಹೋಟೆಲ್ ಇದೆ’...