ಹೊಸತೆಲ್ಲಾ ಹಳೆಯದೇ !
ಹೊಸತು |
ಪೂರ್ಣಚಂದ್ರತೇಜಸ್ವಿಯವರ “ನಿಗೂಢ ಮನುಷ್ಯರು” ಓದಿದ ಮೇಲೆ ಅದ್ಯಾಕೋ ಯೋಗರಾಜ್ ಭಟ್ಟರ “ಮನಸಾರೆ” ಚಲನಚಿತ್ರ ನೆನಪಾಗ್ತಾ ಇದೆ.
ಇವರಿಬ್ಬರೂ ಹೇಳೋಹಾಗೆ ಯಾವುದೂ ಹೊಸತರಂತೆ ಕಾಣುತ್ತಿಲ್ಲ ! ಬೈಕ್ ಓಡಿಸೋಕೆ ಕಲಿಯೋದು ಹೊಸತಲ್ಲ, ಮನೆ ಕಟ್ಟೋದು ಹೊಸತಲ್ಲ (ಹೊಸ ರೀತಿ ಕಟ್ಟಿದರೂ ಕಟ್ಟುವ ಕ್ರಿಯೆಗೆ ‘ಮನೆ ಕಟ್ಟೋದು’ ಅಂತಾನೇ ತಾನೆ ಕರೆಯೋದು). ಇದೇ ರೀತಿ ಇನ್ನೂ ಪಟ್ಟಿ ಮಾಡಬಹುದು. ಕೊನೆಗೆ ಮೇಲೆ ಹೇಳಿದ ರೀತಿ “ಯಾವುದೂ ಹೊಸತಲ್ಲ” ಅನ್ನೋದೂ ಕೂಡ ‘ಭಟ್ಟರು’ ಹೇಳಿಯಾಗಿದೆ. ಹಾಗಾಗಿ ಈ “ಯಾವುದೂ ಹೊಸತಲ್ಲ” ಅಂತ ಹೇಳೋದೂ ಸಹ ಹೊಸತಲ್ಲ.
ನನ್ನಂತಹ ಪೆಕ್ರಗಳನ್ನು ನೋಡಿಯೇ ‘ಗೋಪಾಲ ಕ್ರಿಷ್ಣ ಅಡಿಗ’ ಅವರು “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” ಅಂತ ವ್ಯಾಖ್ಯಾನಿಸಿದ್ದಾರೇನೋ? ಅಲ್ಲಿಗೆ ಈಗ ನಾವು ಮಾಡುತ್ತಿರುವುದೆಲ್ಲವನ್ನೂ ಬಿಟ್ಟು ಇನ್ನ್ನೊಂದೇನೋ “ಹೊಸತು” ಮಾಡಲು ಹೊರಟರೆ ಹಾಗೆ ಹೊಸತೇನೋ ಮಾಡುವುದೂ ಸಹ ಹಳೆಯದೇ ಆಯಿತಲ್ಲ!
ನಾವೇನೇ ಹೊಸದಾಗಿ ಹೇಳಿದರೂ/ಮಾಡಿದರೂ
“ಹೊಸತು” ಎನ್ನುವ ‘ಪದ’ ಹಳೆಯದೇ,
ಹೊಸತನ್ನು ಹುಡುಕುವ ‘ಕ್ರಿಯೆ’ ಹಳೆಯದೇ,
ಯಾರೂ ಹೇಳದಿದ್ದುದನ್ನು, ಕಂಡುಹಿಡಿಯದಿದ್ದುದನ್ನು, ಮಾಡದಿದ್ದುದನ್ನು ಮಾಡುತ್ತೀವಲ್ಲಾ? ಅದಷ್ಟೇ “ಹೊಸತು”.
Photo Courtesy : – Google