ಮುದ್ದು ಮುದ್ದು ಅಮ್ಮ :)
ರೆಟ್ಟೆ ಹಿಡಿದು ‘ಯಾಕೆ ತಡ?’ ಕೇಳೋದಲ್ವ ?
ನನ್ನ ತಲೆಗೆ ಎಣ್ಣೆ ಹಾಕಿ ತಟ್ತಿರ್ತೀಯ.
‘ನೀನೆ ಹಾಕ್ಕೋ ಹೋಗು’ ಅಂತ ಬಯ್ಯೋದಲ್ವ?
ಬಟ್ಟೆ ಕೊಳೆ ಆದಾಗ ತೊಳೆದು ಹಾಕ್ತಿಯ.
‘ತೊಳಿ’ ಅಂತ ನನ್ನ ಮುಖಕೆ ಎಸೆಯೋದಲ್ವ?
ತಿರುಗಿ ಹೋಗುವಾಗ ಮೂಟೆ ತಿಂಡಿ ಕೊಡ್ತಿಯ.
‘ಅಲ್ಲಿ ಹೇಗೂ ಹೋಟೆಲ್ ಇದೆ’ ಅನ್ನೋದಲ್ವ?
ಸಿಡುಕಿ ಉತ್ತರಿಸಿದರೂ ಸುಮ್ಮನಾಗ್ತಿಯ.
ಕೈ ಎತ್ತಿ ಕೆನ್ನೆ ಮೇಲೆ ಬಾರ್ಸೋದಲ್ವ?
ಅದ್ಹೇಗೆ ಕೇಳ್ತಿಯ? ಅದ್ಹೇಗೆ ಬಯ್ತೀಯ? ಅದ್ಹೇಗೆ ಎಸಿತೀಯ? ಅದ್ಹೇಗೆ ಅಂತೀಯ? ಅದ್ಹೇಗೆ ಬಾರಿಸ್ತೀಯ?
ಎಷ್ಟೇ ಅಂದ್ರೂ ನಾನು ನಿನ್ನ ಮಗ ಅಲ್ವ? !
ನೀನು ನನ್ನ ಮುದ್ದು ಮುದ್ದು ಅಮ್ಮ ಅಲ್ವ ? 🙂