ಮುಗುಳುನಗೆಯೇ ನೀ ಹೇಳು
Mugulunage Song Lyrics in Kannada
ಮುಗುಳುನಗೆಯೇ ನೀ ಹೇಳು..
ಮುಗುಳುನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ, ನೀ ಏಕೆ ಜೊತೆಗಿರುವೆ..
ತುಸು ಬಿಡಿಸಿ ಹೇಳು ನನಗೆ,
ನನ ತುಟಿಯೆ ಬೇಕೇ ನಿನಗೇ..
ನನ್ನೆಲ್ಲ ನೋವಿಗು ನಗುವೇ..
ನೀ ಏಕೆ ಹೀಗೇ…
ಮುಗುಳುನಗೆಯೇ ನೀ ಹೇಳು..
ಮುಗುಳುನಗೆಯೇ ನೀ ಹೇಳು..
ಸಾಕಾಗದಾ ಏಕಾಂತವಾ
ನಿನ್ನಿಂದ ನಾ ಕಲಿತೇ..
ಯಾಕಾಗಿ ನೀ ಮರೆಮಾಚುವೆ
ನನ್ನೆಲ್ಲ ಭಾವುಕತೆ..
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೇ ಹೊಸತೇ..
ಅಳುವೊಂದು ಬೇಕು ನನಗೇ..
ಅರೆ ಘಳಿಗೆ ಹೋಗು ಹೊರಗೇ..
ಇಷ್ಟೊಳ್ಳೆ ಸ್ನೇಹಿತನಾಗೀ
ಕಾಡಿದರೆ ಹೇಗೇ..
ಮುಗುಳುನಗೆಯೇ ನೀ ಹೇಳು..
ಮುಗುಳುನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ, ನೀ ಏಕೆ ಜೊತೆಗಿರುವೆ..
ಕಣ್ಣಾಲಿಯಾ ಜಲಪಾತವಾ
ಬಂಧಿಸಲು ನೀ ಯಾರೂ..
ನೀ ಮಾಡುವಾ ನಗೆಪಾಟಲು
ಖಂಡಿಸಲು ನಾ ಯಾರೂ..
ಸಂತೋಷಕೂ, ಸಂತಾಪಕೂ
ಇರಲಿ ಬಿಡು ಒಂದೇ ಬೇರು..
ಕಂಗಳಲಿ ಬಂದಾ ಮಳೆಗೆ
ಕೊಡೆ ಹಿಡಿವ ಆಸೆಯೇ ನಿನಗೇ
ಅತ್ತು ಬಿಡು ನನ್ನಾ ಜೊತೆಗೇ
ನಗಬೇಡ ಹೀಗೇ..
ಮುಗುಳುನಗೆಯೇ ನೀ ಹೇಳು..
ಮುಗುಳುನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ, ನೀ ಏಕೆ ಜೊತೆಗಿರುವೆ..