ಮೊದ್ಲೆಲ್ಲಾ ಕಥೆಗಳು ಬೇಕು ಅನ್ಸಿದ್ರೆ ಒಂದೋ ಪುಸ್ತಕಗಳನ್ನ ಕೊಂಡ್ಕೊಂಡು ಓದ್ಬೇಕಿತ್ತು ಅಥವಾ ಮನೇಲಿ ಕಥೆ ಹೇಳೋ ಅಜ್ಜಿನೋ, ಅಜ್ಜನೋ ಇರ್ಬೇಕಿತ್ತು.ಈಗೆಲ್ಲಾ ಇಂಟರ್ನೆಟ್ ಅಲ್ಲೇ ಎಲ್ಲಾ ಸಿಗೋವಾಗ ಪುಸ್ತಕ ಕೊಳ್ಳೋದು ಕಡಿಮೆ, ಕಥೆ ಹೇಳಕ್ಕೆ ಮನೇಲಿ ಅಜ್ಜಿ, ಅಜ್ಜಾನು ಇರೋದೂ ಕಡಿಮೆ.ಅದಲ್ದೇ ಎಷ್ಟೋ ಜನಕ್ಕೆ ಪುಸ್ತಕವನ್ನ ಕೊಂಡು, ಓದೋಕೆ ಬೇಜಾರು! ಅಥವಾ ಕನ್ನಡ ಓದೋಕೆ ಬರದೇ ಇದ್ರೂ ಮಾತಾಡೋಕೆ ಚೆನ್ನಾಗಿ ಬರುವಂಥವರೂ ಎಷ್ಟೋ ಜನ ಇದ್ದಾರೆ.
ಇಂಥವೇ ಒಂದಷ್ಟು ಕಾರಣಗಳಲ್ಲದೇ ಕನ್ನಡವನ್ನ ಎಲ್ಲರಿಗೂ ಕೇಳಿಸಬೇಕು ಅನ್ನೋ ಜವಾಬ್ದಾರಿಯನ್ನೂ ಇಟ್ಟುಕೊಂಡು ಈ ನೆಲ್ಲಿಕಾಯಿ ಕನ್ನಡ ಪಾಡ್ ಕಾಸ್ಟ್ ಶುರು ಆಗಿ ಇವತ್ತಿಗೆ ಒಂದು ವರ್ಷದ ಮೇಲೆ ಒಂದೆರಡು ತಿಂಗಳು ಕಳೆದಿದೆ.
ಈ ನೆಲ್ಲಿಕಾಯಿ ಪಾಡ್-ಕಾಸ್ಟ್ ಗೆಳೆಯ ಶರತ್ ನ ಕನಸು. ಕನ್ನಡದಲ್ಲಿ ಬರೆಯೋ ಒಂದಷ್ಟು ಜನರ ಸಣ್ಣ ಗುಂಪು ಮಾಡಿ, ಹೆಚ್ಚಾಗಿ ಅವರೇ ಬರೆದಿರುವ ಕಥೆಗಳನ್ನ ಅವರದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿಸಿ, ಆ ರೆಕಾರ್ಡನ್ನ ಎಲ್ಲರೂ ಕೇಳೋಕೆ ಆಗೋ ಥರ ಸ್ವಲ್ಪ ಎಡಿಟ್ ಮಾಡಿ, ವೆಬ್ ಸೈಟ್ ಅಲ್ಲಿ ಹಾಕೋದು ಇವನ ಕೆಲಸ. ನಾನೂ ನೆಲ್ಲಿಕಾಯಿ ಪಾಡ್ ಕಾಸ್ಟ್ ತಂಡದ ಭಾಗ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಇದೆ.
ನೀವೂ ನಿಮ್ಮ ಕಥೆಯನ್ನ ನೆಲ್ಲಿಕಾಯಿ ಪಾಡ್ ಕಾಸ್ಟ್ ಗೆ ಕಳಿಸಿ ನಿಮ್ಮ ಕಥೆಯನ್ನ ಬೇರೆ ಅವರಿಗೆ ಕೇಳಿಸಬಹುದು, ನಿಮ್ಮದೇ ದನಿಯಲ್ಲಿ, ನೀವೇ ಹೇಳಿರೋ ಥರ.
ರೆಕಾರ್ಡ್ ಕಳಿಸೋಕೆ ಇಲ್ಲಿಗೆ ಹೋಗಿ.
ಇಲ್ಲಿ ಕೆಳಗೆ ನನ್ನ ನೆಲ್ಲಿಕಾಯಿ ಪಾಡ್ ಕಾಸ್ಟ್ ಕಥೆಗಳ ಲಿಂಕ್ ಕೊಟ್ಟಿದೀನಿ, ಕೇಳಿ ನೋಡಿ.
Visit: Nallikayi
Visit: Nallikayi
Visit: Nallikayi
Visit: Nallikayi
Visit: Nallikayi
Visit: Nallikayi
Visit: Nallikayi