Tagged: kannada

Baadihoda Balliyinda 0

ಬಾಡಿಹೋದ ಬಳ್ಳಿಯಿಂದ

Baadihoda Balliyinda Song Lyrics in Kannada ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆತಂತಿ ಹರಿದ ವೀಣೆ ಇಂದ ನಾದ ಹರಿಯ ಬಲ್ಲದೆಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲಉಲ್ಲಾಸ ಇನ್ನೆಲ್ಲಿದೆ … ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ …ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ...

bhaavane 0

ಭಾವನೆ

ಈ ಭಾವನೆಗಳೆ ಹೀಗೆ ಕೆಲವೊಮ್ಮೆ ಸರಾಗದ ಜಲಪಾತ ಮರುಘಳಿಗೆ ಬೆಟ್ಟದಂತೆ ನಿಶ್ಚಲ ಆಗಾಗ ಉನ್ಮತ್ತ, ನಿಂದನೆಗೆ ಕುಂಠಿತ, ಬೇಜಾರಿನ ಮೊರೆತ ಆನಂದಕೆ ಆಹ್ಲಾದ, ಕೆಣಕಿದರೆ ಕ್ರೋಧ, ಸಾವಿಗೂ ಸಿದ್ಧ ಗೆಲ್ಲುವ ಗರ್ವ, ಕೊನೆಯಿರದ ಪರ್ವ ಚಿಂತನ, ಮಂಥನ, ಸಮಕಾಲೀನ, ಆಪ್ಯಾಯಮಾನ ಈ ಭಾವನೆಗಳೆ ಹೀಗೆ ಕೆಲವೊಮ್ಮೆ ತಿಳಿಯಲಾಗದ ಅನುಪಾತ ಮರುಘಳಿಗೆ ತಪ್ಪೇ ಮಾಡದಷ್ಟು ನಿರ್ಮಲ

dayavittu-kshamisi 0

ದಯವಿಟ್ಟು ಕ್ಷಮಿಸಿ

ಕೆಲ ದಿನಗಳ ಹಿಂದೆ ಡೆಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಡೆಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆ ಬೆಳಿಗ್ಗೆ ಆ ಯುವತಿ ತೀರಿಕೊಂಡಮೇಲಂತೂ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಶ್ನೆ “ಆ ಕ್ರೂರ ಅತ್ಯಾಚಾರಿಗಳಿಗೆ ಶಿಕ್ಷೆ ಯಾವಾಗ?” ಅಂತ. ಸದ್ಯದ ಮಟ್ಟಿಗೆ ಆ ಪ್ರಶ್ನೆ, ಅದಕ್ಕೆ ಆದಷ್ಟು ಬೇಗ ಸರ್ಕಾರದಿಂದ ಉತ್ತರ ಪಡೆಯಬೇಕೆಂಬ ಹಂಬಲ ಸರಿಯೇ ಆಗಿದ್ದರೂ, ಅಷ್ಟರಿಂದಲೇ ಮುಂದಾಗಬಹುದಾದ ಈ ರೀತಿಯ...

modala-male 0

ಮೊದಲ ಮಳೆ

ದ್ವೀಪದಲ್ಲೊಂದು ಮರ ಮರದ ಮೇಲೊಂದು ಹಕ್ಕಿ ಹಕ್ಕಿಯ ಬಾಯಲ್ಲಿ ಗೆದ್ದಲು ಗೂಡಿನಲ್ಲುಳಿದ ಗೆದ್ದಳುಗಳಿಗೆ ತಾವು ಉಳಿದೆವೆಂಬ ಖುಷಿ ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ ಮರಕ್ಕೆ ಹಕ್ಕಿ, ಗೆದ್ದಲು ಸೇರಿ ತನ್ನ ತಿಂದಾವೆಂಬ ಭಯ ಇದ್ದಕ್ಕಿದ್ದಂತೆ ಪಟಪಟನೆ ಗೆದ್ದಲು ಗೂಡಿನ ಮೇಲೆ ಬಿದ್ದ ಮಳೆಹನಿ ಗೆದ್ದಲುಗಳಿಗೆ ತಮ್ಮ ಗೂಡು ಹಾಳಾದೀತೆಂಬ ಭಯ ಹಕ್ಕಿಗೆ ತನ್ನ ಮಕ್ಕಳು ಒದ್ದೆ ಆದಾವೆಂಬ ಭಯ ಮರಕ್ಕೆ ತಾನು ಸ್ವತಂತ್ರನಾಗುವೆನೆಂಬ ಖುಷಿ ಮೊದಲ ಮಳೆಯ ಖುಷಿ 🙂

nanmansu 0

Facebook ಒಳ್ಳೆಯದೋ? ಕೆಟ್ಟದ್ದೋ?!

“ಹೇಯ್ ಮಗಾ ಅವತ್ತು ರಾಕೇಶ್ ಹತ್ರ ಮಾತಾಡ್ದೆ ಕಣೋ! ಡೆಲ್ಲಿಲಿ ಇದಾನಂತೆ ಈಗ.” “ಅವ್ನ mobile number ಹೆಂಗೋ ಸಿಕ್ತು ನಿಂಗೆ?” “Facebook ಅಲ್ಲಿ ಇದಾನೆ ಮಗಾ! ಹೇಗ್ ಆಗಿದಾನೆ ಗೊತ್ತ ಈಗ? ನನ್ profile ಅಲ್ಲಿ ಇದಾನೆ ನೋಡು” “ಏನ್ ಗೊತ್ತ? ನಿನ್ನೆ ನಾನು ಪ್ರವೀಣ್ ಜೊತೆ coffee dayಗೆ ಹೋಗಿದ್ದೆ, ಎಷ್ಟು ಒಳ್ಳೆಯವನು ಗೊತ್ತ ಅವ್ನು? ತುಂಬಾ care ಮಾಡ್ತಾನೆ ಕಣೆ” “ಹೌದ? ಅಲ್ವೇ ಈ ಪ್ರವೀಣ್...