ಭಾವನೆ
ಈ ಭಾವನೆಗಳೆ ಹೀಗೆ
ಕೆಲವೊಮ್ಮೆ ಸರಾಗದ ಜಲಪಾತ
ಮರುಘಳಿಗೆ ಬೆಟ್ಟದಂತೆ ನಿಶ್ಚಲ
ಆಗಾಗ ಉನ್ಮತ್ತ, ನಿಂದನೆಗೆ ಕುಂಠಿತ, ಬೇಜಾರಿನ ಮೊರೆತ
ಆನಂದಕೆ ಆಹ್ಲಾದ, ಕೆಣಕಿದರೆ ಕ್ರೋಧ, ಸಾವಿಗೂ ಸಿದ್ಧ
ಗೆಲ್ಲುವ ಗರ್ವ, ಕೊನೆಯಿರದ ಪರ್ವ
ಚಿಂತನ, ಮಂಥನ, ಸಮಕಾಲೀನ, ಆಪ್ಯಾಯಮಾನ
ಈ ಭಾವನೆಗಳೆ ಹೀಗೆ
ಕೆಲವೊಮ್ಮೆ ತಿಳಿಯಲಾಗದ ಅನುಪಾತ
ಮರುಘಳಿಗೆ ತಪ್ಪೇ ಮಾಡದಷ್ಟು ನಿರ್ಮಲ