Category: ಘಟನೆ

Maleegaalada Malenaadu 4

ಮಳೆಗಾಲದ ಮಲೆನಾಡು

ಚಿಕ್ಕವನಿದ್ದಾಗ ನನ್ನ ಪಾಲಿಗೆ ಮಳೆಗಾಲ ಶುರು ಆಗ್ತಿದ್ದಿದ್ದು ಮನೆಯ ಪಕ್ಕ, ಮನೆಗಿಂತಲೂ ಎತ್ತರ ಇರೋ ಮಣ್ಣಿನ ಧರೆಯ ಮಣ್ಣು ಜರಿದು, ಅದರ ಕೆಳಗಿರುವ ನೀರಿನ ಕಾಲುವೆ ಮುಚ್ಚಿದಾಗ. ಜರಿದ ಮಣ್ಣನ್ನು ತೆಗೆದು ಕಾಲುವೆಯಲ್ಲಿ ನೀರು ಹೋಗುವಂತೆ ಮಾಡದಿದ್ದರೆ, ಕಾಲುವೆಯ ನೀರೆಲ್ಲಾ ಮನೆಯ ಅಂಗಳಕ್ಕೆ ಬರುತ್ತಿತ್ತು. ಅಪ್ಪ ಹಾರೆ, ಗುದ್ದಲಿ ಜೊತೆಗೆ ಕಾಲುವೆಯ ಮಣ್ಣು ತೆಗೆಯಲು ಹೊರಟರೆ ನಾನೂ ಅಪ್ಪನೊಟ್ಟಿಗೆ ಏನೋ ಬಹಳ ಕೆಲಸ ಮಾಡುವವನ ಥರ ಹೋಗ್ತಿದ್ದೆ. ಆದರೆ ನನಗೆ...

Bus-Kereta 0

ಬಸ್ ಕೆರೆತ !

ಮೂರು ವರ್ಷದ ಹಿಂದೆ ಹಿಂಗೊಂದು ಘಟನೆ ಆಗಿತ್ತು ಅಂತ ಫೇಸ್-ಬುಕ್ ಅಲ್ಲಿ ಬರ್ದಿದ್ದೆ! ~~~~ ಕೆಲವ್ರಿಗೆ ಬೈಬೇಕೋ, ಮೆಟ್ಟು ತಗೊಂಡು ಹೊಡೀಬೇಕೋ ಗೊತಾಗಲ್ಲ!! ಇವತ್ತು ಬೆಳ್ಗೆ ಬಸ್ಸಲ್ಲಿ ಸದಾಶಿವನಗರದ ಕಡೆಯಿಂದ ಮೆಜೆಸ್ಟಿಕ್ಕಿಗೆ ಬರ್ಬೇಕಾದ್ರೆ ಪಕ್ಕದಲ್ಲಿ ಯಾರೋ ಒಬ್ಬ ಬಂದು ಕೂತ(ಆತ ನಂಗಿಂತ ಐದಾರು ವರ್ಷ ದೊಡ್ಡವ್ನಾಗಿದ್ರೂ ಬಹುವಚನ ಉಪಯೋಗಿಸಬೇಕು ಅನ್ನಿಸ್ತಿಲ್ಲ !!). ಕೂರ್ತಿದ್ದ ಹಾಗೇ ಮೊಬೈಲ್ ತೆಗೆದು ತಮಿಳಿನಲ್ಲಿ ಜೋರಾಗಿ ಮಾತಾಡೋಕೆ ಶುರು ಮಾಡ್ದ. ಅವ್ನು ಮಾತಾಡೋ ರೀತಿ ನೋಡಿದ್ರೆ ಅವ್ನು...

minchula 2

ಮಿಂಚುಳ

13-07-2014 ರ ಪಂಜು ಅಂತರ್ಜಾಲ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ http://www.panjumagazine.com/?p=7938 ~ ಮಿಂಚುಳ ~ ನವೀನ್ ಸಾಗರ್ ಅವ್ರು ಬರ್ದಿರೋ ‘ಣವಿಣ – ಅಂಗಾಲಲ್ಲಿ ಗುಳುಗುಳು’ ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! ‘ಸಿಲ್ಲಿ-ಲಲ್ಲಿ’ ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು ‘ಜೇಡ ಕಟ್ಟಿರೋ ಮೂಲೆ ನೋಡ್ದೆ’.     ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ...

shikshakarigondu 0

ಶಿಕ್ಷಕರಿಗೊಂದು ಸೆಲ್ಯೂಟ್

೭-೧೦-೨೦೧೩ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ http://www.panjumagazine.com/?p=4499 ~ ಶಿಕ್ಷಕರಿಗೊಂದು ಸೆಲ್ಯೂಟ್ ~ ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ. ಒಂದು...

thirthalli-holi 1

ತೀರ್ಥಹಳ್ಳಿಯಲ್ಲೊಂದು ಹೋಳಿ

ದಾರೀಲಿ ಸಿಕ್ಕಿದವರೆಲ್ಲಾ ನಮಗೆ ಬಣ್ಣ ಹಾಕ್ತಾರೆ ಅನ್ಕೊಂಡು ಸ್ವಲ್ಪ ಡಾರ್ಕ್ ಕಲರ್ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಹೊರ್ಟಿದ್ವಿ. ಆಗ ನಾವಿನ್ನೂ ಡಿಪ್ಲೋಮಾ ಎರಡನೇ ಸೆಮಿಸ್ಟರ್ ನಲ್ಲಿ ಓದ್ತಾ ಇದ್ದಿದ್ರಿಂದ ಕಾಲೇಜಿಗೆ ಹೋಗೋದು ತಪ್ಪಿಸ್ತಿದ್ದಿದ್ದು ಕಡಿಮೆ. ಕಾಲೇಜಿನಲ್ಲಿ ಬೇರೆ ಎಲ್ಲಾ ಕ್ಲಾಸ್ ಗಳಲ್ಲಿ ಮುಖಕ್ಕೆಲ್ಲ ಬಣ್ಣ ಬಳ್ಕೊಂಡು ಓಡಾಡ್ತಿದ್ರೂ ನಮ್ಮ ಕ್ಲಾಸಲ್ಲಿರೋ ಯಾರಿಗೂ ಅದ್ಯಾಕೋ ಹೋಳಿ ಆಡೋ ಮನಸೇ ಆಗಿರ್ಲಿಲ್ಲ ( ಅಥವಾ ಆ ರೀತಿ ನಟಿಸುತ್ತಿದ್ದರು !).ಮಧ್ಯಾನ್ಹ ಕ್ಲಾಸ್ ಮುಗೀತು,...

dayavittu-kshamisi 0

ದಯವಿಟ್ಟು ಕ್ಷಮಿಸಿ

ಕೆಲ ದಿನಗಳ ಹಿಂದೆ ಡೆಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಡೆಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆ ಬೆಳಿಗ್ಗೆ ಆ ಯುವತಿ ತೀರಿಕೊಂಡಮೇಲಂತೂ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಶ್ನೆ “ಆ ಕ್ರೂರ ಅತ್ಯಾಚಾರಿಗಳಿಗೆ ಶಿಕ್ಷೆ ಯಾವಾಗ?” ಅಂತ. ಸದ್ಯದ ಮಟ್ಟಿಗೆ ಆ ಪ್ರಶ್ನೆ, ಅದಕ್ಕೆ ಆದಷ್ಟು ಬೇಗ ಸರ್ಕಾರದಿಂದ ಉತ್ತರ ಪಡೆಯಬೇಕೆಂಬ ಹಂಬಲ ಸರಿಯೇ ಆಗಿದ್ದರೂ, ಅಷ್ಟರಿಂದಲೇ ಮುಂದಾಗಬಹುದಾದ ಈ ರೀತಿಯ...

ayaskaanta 2

ಆಯಸ್ಕಾಂತ

“ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ”, “ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು”, “ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು” ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ...

parisara-dina 0

ಪರಿಸರ ದಿನ

  ಇವತ್ತು ವಿಶ್ವ ಪರಿಸರ ದಿನ ಅಂತ ಗೊತ್ತಾದ ಕೂಡಲೇ ನನಗೆ ನೆನಪಾದ ಘಟನೆ ! ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ  ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ “ಅಮ್ಮಾ! ಏನಾದ್ರು  ಕೊಡ್ಸೆ?” ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ...

baalya-snehita 0

ಬಾಲ್ಯ ಸ್ನೇಹಿತ

ನಾವೇನೂ ಮೂರು ಹೊತ್ತೂ ಒಟ್ಟಿಗೆ ಇರುತ್ತಾ ಇದ್ದ ಸ್ನೇಹಿತರಲ್ಲ. ಆದರೆ ಯಾವ ಹೊತ್ತಲ್ಲಿ ಸಿಕ್ಕಿದರೂ ಜಗಳ ಆಡಿದವರಲ್ಲ. ಕ್ರಿಕೆಟ್ ಅನ್ನೋ ಆಟವನ್ನ ಹೆಚ್ಚು ಕಡಿಮೆ ದಿನಾ ಆಡ್ತಾ ಇದ್ವಿ ಅಲ್ವನೋ? ನನಗೂ ನಿನಗೂ ವಯಸ್ಸಲ್ಲಿ ಬರೀ ಮೂರ್ನಾಲ್ಕು ತಿಂಗಳುಗಳ ಅಂತರವಿದ್ದಿದ್ದರಿಂದಲೋ ಏನೋ  ನಮ್ಮ ಯೋಚನೆಗಳು ಒಂದೇ ದಿಕ್ಕಿನಲ್ಲಿರುತ್ತಿದ್ದವು. ನಿನಗೂ ಗೊತ್ತು, ನಮಗಿಂತ ಮೊದಲು ನಿನ್ನ ಮತ್ತು ನನ್ನ ಅಪ್ಪ ಸ್ನೇಹಿತರು. ಯಾವಾಗಲೋ ಒಮ್ಮೆ ನಿಮ್ಮ ಅಪ್ಪ ನಮ್ಮ ಅಪ್ಪನ ಬಳಿ ಹೇಳಿದ ನೆನಪು “ನಮ್ಮಿಬ್ಬರ ಥರಾನೆ...