ಗ್ರಿಂಚ Vs ಚಿಂಗ್ರ – ನಂಬಿಕೆ
ಗ್ರಿಂಚ – ದೇವರನ್ನು ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ
ಗ್ರಿಂಚ – ದೆವ್ವ, ಭೂತ ಇದನ್ನೆಲ್ಲಾ ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ!
ಗ್ರಿಂಚ – ಡಾರ್ವಿನ್-ನ ವಿಕಾಸವಾದವನ್ನ ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ!
ಗ್ರಿಂಚ – Theory of Big Bang ನ ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ!!
ಗ್ರಿಂಚ – ಮಾಟ, ಮಂತ್ರ, ಬ್ಲಾಕ್ ಮ್ಯಾಜಿಕ್, ಅಗೋಚರ ಶಕ್ತಿ, ಪುನರ್ಜನ್ಮ, ಪೂರ್ವಜನ್ಮ ಇದನ್ನೆಲ್ಲಾ ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ!!
ಗ್ರಿಂಚ – ಬೇರೆ ಗ್ರಹಗಳಲ್ಲಿ ನಮಗಿಂತಾ ಮುಂದುವರಿದಿರೋ ಜೀವಿಗಳಿದೆ ಅಂತ ನಾವು ನಂಬಬೇಕೋ ಬೇಡ್ವೋ?
ಚಿಂಗ್ರ – ಗೊತ್ತಿಲ್ಲ!!
ಗ್ರಿಂಚ – ಸಸ್ಯಾಹಾರ ಒಳ್ಳೇದಾ, ಮಾಂಸಾಹಾರ ಒಳ್ಳೇದಾ?
ಚಿಂಗ್ರ – ಗೊತ್ತಿಲ್ಲ.
ಗ್ರಿಂಚ – ಲೇ ಚಿಂಗ್ರ.. ನಿಂಗೆ ಯಾವುದರ ಮೇಲೂ ಸ್ಪಷ್ಟ ನಿಲುವೇ ಇಲ್ವಲ್ಲೋ. ಯಾವುದರ ಮೇಲಾದ್ರೂ ನಂಬಿಕೆ ಇರ್ಬೇಕು ಕಣೋ!
ಚಿಂಗ್ರ – ಪೆಕ್ರು ಮುಂಡೇದೇ.. ನೀನು ಕೇಳಬೇಕಾಗಿದ್ದೇ ಕೇಳಿಲ್ವಲ್ಲೋ. ನಾನು ನನ್ನನ್ನ ನಂಬ್ತೀನೋ ಇಲ್ವೋ ಅಂತ. ನಾನು ನನ್ನನ್ನ ಸಂಪೂರ್ಣವಾಗಿ ನಂಬ್ತೀನಿ! ನೀ ಕೇಳಿರೋ ಎಲ್ಲಾ ವಿಷಯಗಳೂ ಅನಾದಿ ಕಾಲದಿಂದ ನಿರ್ಧಾರ ಆಗದೇ ಇರುವಂಥವು. ಅಂಥಾದ್ದರಲ್ಲಿ ಅದರ ಬಗ್ಗೆ ನಾವು ಹೇಗೆ ಸ್ಪಷ್ಟ ನಿಲುವು ಇಟ್ಕೊಳ್ಳೋದು? ನಮಗೆಲ್ಲರಿಗೂ ಬೇಕಾಗಿರೋದು ಇದ್ಯಾವುದರ ಮೇಲೂ ನಂಬಿಕೆ ಅಲ್ಲ. ನಮ್ಮ ಬಗ್ಗೆ, ನಾವು ಮಾಡ್ತಾ ಇರೋ ಕೆಲಸದ ಬಗ್ಗೆ ನಂಬಿಕೆ ಇಟ್ರೆ ಸಾಕಲ್ವಾ?
ಗ್ರಿಂಚ – ಓಹೋಹೋಹೋಹೋ…. ನೀವು ಆ…… ಥರ. _/\_ ಅಡ್ ಬಿದ್ದೆ ಬುದ್ಧಿ..