ಪ್ರೀತಿಯಾ ಹೆಸರೇ ನೀನು
ರಘು ದೀಕ್ಷಿತ್ ಕನ್ನಡದಲ್ಲಿ ರಾಕ್ ಹಾಡುಗಳಿಗೆ ಜಾಸ್ತಿ ಫೇಮಸ್ ಆಗಿದ್ರೂ, ಈ ಥರದ ಮೆಲೋಡಿಯಸ್ ಹಾಡುಗಳಲ್ಲೂ ಮೋಡಿ ಮಾಡುವಂಥವರು. ‘ಸೈಕೋ’ ಚಿತ್ರದ ‘ಏನೋ ಇದೆ’, ಅವರ ಅಲ್ಬಮ್ಮಿನ ‘ಅಂಬರ್’, ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ‘ಮುಂಜಾನೆ ಮಂಜಲ್ಲಿ’ ಹಾಡುಗಳ ಥರಾನೇ ಯಾವ್ದೋ ಬೇರೆ ಲೋಕಕ್ಕೆ ಕರ್ಕೊಂಡು ಹೋಗೋ ಹಾಡು ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಈ ‘ಪ್ರೀತಿಯಾ ಹೆಸರೇ ನೀನು’. ರಘು ದೀಕ್ಷಿತ್ ಧ್ವನಿಯ ಜೊತೆಗೆ ಬರೀ ಗಿಟಾರ್ ಮಾತ್ರ ಇರೋದು ಈ ಹಾಡಿನ ವಿಶೇಷ.
ಈ ಹಾಡನ್ನ ರೆಕಾರ್ಡ್ ಮಾಡ್ಬೇಕು ಅನಿಸಿದಾಗ, ಈ ಸಲ ಆಡಿಯೋ, ವೀಡಿಯೋ ಎರಡನ್ನೂ ಚನ್ನಾಗಿ ಬರೋ ಥರ ಮಾಡ್ಬೇಕು ಅನ್ಕೊಂಡಿದ್ದೆ. ಅದಕ್ಕೆ ಸಹಾಯ ಮಾಡಿದವನು ಗೆಳೆಯ ಅಮಿತ್ ಭಾರತೀಪುರ. ಏನಿಲ್ಲಾ ಅಂದ್ರೂ ಒಂದು ಹತ್ತು ಸಲ ಹಾಡು ರೆಕಾರ್ಡ್ ಮಾಡಿದೀವಿ. ಅದರಲ್ಲಿ ಮೂರರಿಂದ ನಾಲ್ಕು ಸಲ ಮೈಕ್ ಮತ್ತು ವೈರ್ ಲೂಸ್ ಕನೆಕ್ಷನ್ ಇಂದಾಗಿ ಹಾಡು ರೆಕಾರ್ಡ್ ಆಗೇ ಇರ್ಲಿಲ್ಲ !
ನನಗೆ ನುಡಿಸೋಕೆ ಬರುವಷ್ಟು ಗಿಟಾರ್ ನುಡಿಸಿ ಹಾಡೋ ಪ್ರಯತ್ನ ಮಾಡಿದೀನಿ. ಕೇಳಿ 🙂
ಚಿತ್ರ : ಹ್ಯಾಪಿ ನ್ಯೂ ಇಯರ್
ಸಂಗೀತ : ರಘು ದೀಕ್ಷಿತ್
ಗಾಯಕ : ರಘು ದೀಕ್ಷಿತ್
ಸಾಹಿತ್ಯ : ವಾಸುಕಿ ವೈಭವ್ ಮತ್ತು ರಾಘವೇಂದ್ರ ವಿ ಕಾಮತ್
Falling in love… Awesome
Thank you Ketan 🙂