ನನ್ ಮನ್ಸು ಬರೆಯುತ್ತೆ, ಹಾಡುತ್ತೆ, ನಗುತ್ತೆ, ಅಳುತ್ತೆ ಇನ್ನೂ ಏನೇನೋ! ನಿಮ್ಗೂ ಇಷ್ಟ ಆಗ್ಬೋದು ನೋಡ್ತಾ ಹೋಗಿ..

Baadihoda Balliyinda 0

ಬಾಡಿಹೋದ ಬಳ್ಳಿಯಿಂದ

Baadihoda Balliyinda Song Lyrics in Kannada ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆತಂತಿ ಹರಿದ ವೀಣೆ ಇಂದ ನಾದ ಹರಿಯ ಬಲ್ಲದೆಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲಉಲ್ಲಾಸ ಇನ್ನೆಲ್ಲಿದೆ … ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ …ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ...

Maths Home Work 0

ಗಣಿತದ ಹೋಂ ವರ್ಕ್

ನಾನು ಬೆಳಗ್ಗೆ ಪುಸ್ತಕಗಳನ್ನ ಚೀಲಕ್ಕೆ ತುಂಬುವಾಗಲೇ ನೆನಪಾಗಿದ್ದು, ಇವತ್ತಿಗೆ ಬರೆಯಲು ಹೇಳಿದ್ದ ಗಣಿತ ಹೋಂ ವರ್ಕ್ ಬರೆದಿಲ್ಲ ಅಂತ! ‘ನಿನ್ನೆ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಭಾರತ ಸೋಲೋದನ್ನ ನೋಡೋಕಿಂತ ಹೋಂ ವರ್ಕ್ ಆದ್ರೂ ಮಾಡಿದ್ರೆ ನಾಗರತ್ನ ಟೀಚರ್ ಹತ್ರ ಪೆಟ್ಟು ತಿನ್ನೋದು ಉಳೀತಿತ್ತು’ ಅಂತ ಬೈಕೋತಾ, ಇನ್ನೂ ಲೇಟ್ ಆದ್ರೆ ಬಸ್ ಸಿಗಲ್ಲ ಸ್ಕೂಲಿಗೆ ಹೋಗೋಕೆ ಅನ್ಕೋತಾ ಮನೆಯಿಂದ ಒಂದು ಕಿ.ಮೀ. ದೂರ ಇರುವ ಬಸ್ ಸ್ಟಾಪಿನ ಕಡೆಗೆ...

Mugulunageye Nee Helu 0

ಮುಗುಳುನಗೆಯೇ ನೀ ಹೇಳು

Mugulunage Song Lyrics in Kannada ಮುಗುಳುನಗೆಯೇ ನೀ ಹೇಳು.. ಮುಗುಳುನಗೆಯೇ ನೀ ಹೇಳು.. ಯಾರಿರದ ವೇಳೆಯಲ್ಲಿ, ನೀ ಏಕೆ ಜೊತೆಗಿರುವೆ.. ತುಸು ಬಿಡಿಸಿ ಹೇಳು ನನಗೆ, ನನ ತುಟಿಯೆ ಬೇಕೇ ನಿನಗೇ.. ನನ್ನೆಲ್ಲ ನೋವಿಗು ನಗುವೇ.. ನೀ ಏಕೆ ಹೀಗೇ… ಮುಗುಳುನಗೆಯೇ ನೀ ಹೇಳು.. ಮುಗುಳುನಗೆಯೇ ನೀ ಹೇಳು.. ಸಾಕಾಗದಾ ಏಕಾಂತವಾ ನಿನ್ನಿಂದ ನಾ ಕಲಿತೇ.. ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ.. ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೇ...

hey-navile-hennavile 0

ಹೇ ನವಿಲೇ… ಹೆಣ್ಣವಿಲೇ..

Hey Navile Song Lyrics in Kannada ಹೇ ನವಿಲೇ… ಹೆಣ್ಣವಿಲೇ.. ಹೇ ನವಿಲೇ ನವಿಲೇ.. ಹೆಣ್ಣವಿಲೇ.. ನವಿಲೇ.. ಬಾ ನವಿಲೇ.. ನವಿಲೇ.. ಬಾ ನವಿಲೇ.. ನವಿಲೇ.. ಆ ಸೌಂದರ್ಯ ಲೋಕದಿಂದ ಜಾರಿದೆ.. ನಿನ್ನ ನೋಡೋಕೆ ನೂರು ಕಣ್ಣು ಸಾಲದೇ.. ಆಕಾಶ ಕಾಣುವಾ.. ಮಳೆ ಬಿಸಿಲು ಬೀಳುವಾ.. ಆಕಾಶ ಕಾಣುವಾ, ಮಳೆ ಬಿಸಿಲು ಬೀಳುವಾ.. ಮನೆಗೆಂದು ನೀನು ಬರುವೇ.. ಬರುವೇ… ನಿನಗಾಗಿ ನಾನಿಲ್ಲಿ ಕಾದಿರುವೆನು.. ಮನೆಯಂತೆ ಮನಸನ್ನು ತೆರೆದಿರುವೆನು.. ನಿನ...

Maleegaalada Malenaadu 4

ಮಳೆಗಾಲದ ಮಲೆನಾಡು

ಚಿಕ್ಕವನಿದ್ದಾಗ ನನ್ನ ಪಾಲಿಗೆ ಮಳೆಗಾಲ ಶುರು ಆಗ್ತಿದ್ದಿದ್ದು ಮನೆಯ ಪಕ್ಕ, ಮನೆಗಿಂತಲೂ ಎತ್ತರ ಇರೋ ಮಣ್ಣಿನ ಧರೆಯ ಮಣ್ಣು ಜರಿದು, ಅದರ ಕೆಳಗಿರುವ ನೀರಿನ ಕಾಲುವೆ ಮುಚ್ಚಿದಾಗ. ಜರಿದ ಮಣ್ಣನ್ನು ತೆಗೆದು ಕಾಲುವೆಯಲ್ಲಿ ನೀರು ಹೋಗುವಂತೆ ಮಾಡದಿದ್ದರೆ, ಕಾಲುವೆಯ ನೀರೆಲ್ಲಾ ಮನೆಯ ಅಂಗಳಕ್ಕೆ ಬರುತ್ತಿತ್ತು. ಅಪ್ಪ ಹಾರೆ, ಗುದ್ದಲಿ ಜೊತೆಗೆ ಕಾಲುವೆಯ ಮಣ್ಣು ತೆಗೆಯಲು ಹೊರಟರೆ ನಾನೂ ಅಪ್ಪನೊಟ್ಟಿಗೆ ಏನೋ ಬಹಳ ಕೆಲಸ ಮಾಡುವವನ ಥರ ಹೋಗ್ತಿದ್ದೆ. ಆದರೆ ನನಗೆ...

ale-moodade-aaj-ibaadat 0

ಅಲೆ ಮೂಡದೇ & Aaj Ibaadat

Always wanted to try a Kannada-Hindi medley of songs. I thought these two songs fits perfectly and so tried here. Song – Ale Moodade Movie – Godhi Banna Sadharana Mykattu Lyrics – Sudarshan D C Singer – Sooraj Santhosh Music Director – Charan Raj Song – Aaj Ibaadat Movie –...

preetiya-hesare-neenu 2

ಪ್ರೀತಿಯಾ ಹೆಸರೇ ನೀನು

ರಘು ದೀಕ್ಷಿತ್ ಕನ್ನಡದಲ್ಲಿ ರಾಕ್ ಹಾಡುಗಳಿಗೆ ಜಾಸ್ತಿ ಫೇಮಸ್ ಆಗಿದ್ರೂ, ಈ ಥರದ ಮೆಲೋಡಿಯಸ್ ಹಾಡುಗಳಲ್ಲೂ ಮೋಡಿ ಮಾಡುವಂಥವರು. ‘ಸೈಕೋ’ ಚಿತ್ರದ ‘ಏನೋ ಇದೆ’, ಅವರ ಅಲ್ಬಮ್ಮಿನ ‘ಅಂಬರ್’, ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ‘ಮುಂಜಾನೆ ಮಂಜಲ್ಲಿ’ ಹಾಡುಗಳ ಥರಾನೇ ಯಾವ್ದೋ ಬೇರೆ ಲೋಕಕ್ಕೆ ಕರ್ಕೊಂಡು ಹೋಗೋ ಹಾಡು ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಈ ‘ಪ್ರೀತಿಯಾ ಹೆಸರೇ ನೀನು’. ರಘು ದೀಕ್ಷಿತ್ ಧ್ವನಿಯ ಜೊತೆಗೆ ಬರೀ ಗಿಟಾರ್ ಮಾತ್ರ...

Nambike 0

ಗ್ರಿಂಚ Vs ಚಿಂಗ್ರ – ನಂಬಿಕೆ

ಗ್ರಿಂಚ – ದೇವರನ್ನು ನಾವು ನಂಬಬೇಕೋ ಬೇಡ್ವೋ? ಚಿಂಗ್ರ – ಗೊತ್ತಿಲ್ಲ ಗ್ರಿಂಚ – ದೆವ್ವ, ಭೂತ ಇದನ್ನೆಲ್ಲಾ ನಾವು ನಂಬಬೇಕೋ ಬೇಡ್ವೋ? ಚಿಂಗ್ರ – ಗೊತ್ತಿಲ್ಲ! ಗ್ರಿಂಚ – ಡಾರ್ವಿನ್-ನ ವಿಕಾಸವಾದವನ್ನ ನಾವು ನಂಬಬೇಕೋ ಬೇಡ್ವೋ? ಚಿಂಗ್ರ – ಗೊತ್ತಿಲ್ಲ! ಗ್ರಿಂಚ – Theory of Big Bang ನ ನಾವು ನಂಬಬೇಕೋ ಬೇಡ್ವೋ? ಚಿಂಗ್ರ – ಗೊತ್ತಿಲ್ಲ!! ಗ್ರಿಂಚ – ಮಾಟ, ಮಂತ್ರ, ಬ್ಲಾಕ್ ಮ್ಯಾಜಿಕ್, ಅಗೋಚರ...

tondare 0

ತೊಂದರೆ

ಕಾಲ್ಬೆರಳ ಸಂದೀಲಿ ಸಿಗೋ ಕಲ್ಲು ಪೆನ್ನಿನ ತುದೀಲಿ ಹೆಚ್ಚಾಗಿರೋ ಇಂಕು ತಲೆ ಮಧ್ಯ ಕಾಣೋ ಬಿಳಿ ಕೂದಲು ಮೂಗಿನ ತುದೀಲಿ ಎದ್ದಿರೋ ಗುಳ್ಳೆ ಪ್ಯಾಂಟಿನ ಜೇಬಲ್ಲಿ ಸಿಗೋ ಹಳೇ ಬಿಲ್ಲು ಇನ್ನೂ ನೇತಾಡ್ತಾ ಇರೋ ಹಿಂದಿನ ವರ್ಷದ ಕ್ಯಾಲೆಂಡರ್ ಹಲ್ಲಿನ ಮಧ್ಯ ಸಿಗೋ ಬಾಳೇಕಾಯಿ ಚಿಪ್ಸಿನ ಚೂರು ತುಂಡಾಗಿದ್ರೂ ಇನ್ನೂ ಇರೋ ಹಳೇ ಚಪ್ಲಿ ಉದ್ದ ಹೆಚ್ಚಾಗಿ ಚುಚ್ಚುತ್ತಾ ಇರೋ ಕಾಲಿನ ಉಗುರು ಚಾರ್ಜ್ ಆಗ್ದೇ ಇದ್ರೂ ಹಾಗೇ ಇಟ್ಕೊಂಡಿರೋ...

bangalore-joint-family 0

ಜಾಯಿಂಟ್ ಫ್ಯಾಮಿಲಿ = ಬೆಂಗಳೂರು

ಒಂದು ಊರು. ಅಲ್ಲಿ ಒಂದು ಜಾಯಿಂಟ್ ಫ್ಯಾಮಿಲಿ. ತುಂಬಾ ದೊಡ್ಡ ಮನೆ. ಮನೆಯಲ್ಲಿರುವವರಿಗೆ ಸಹಾಯ ಮಾಡುವ ಗುಣ ಸ್ವಲ್ಪ ಜಾಸ್ತೀನೆ. ನಮ್ಮ ಮನೆಗೆ ಒಳ್ಳೇ ಹೆಸರು ಬರಬೇಕು ಅಂತ, ಬೇರೆ ಊರಿಂದ ಏನೋ ಕೆಲಸದ ಮೇಲೆ ಈ ಊರಿಗೆ ಬರುವವರಿಗೆ ಉಳಿಯಲು ಜಾಗ ಇಲ್ಲ ಅಂತ ಗೊತ್ತಾಗಿ “ಇಲ್ಲೇ ಬನ್ನಿ” ಅಂತ ಆ ದೊಡ್ಡ ಮನೆಯಲ್ಲಿ ತಮ್ಮ ರೂಮನ್ನೇ ಬಿಟ್ಟು ಕೊಟ್ಟವರೆಷ್ಟೋ?! ಅತಿಥಿ ದೇವೋ ಭವ! ಆ ಬೇರೆ ಊರಿಂದ...

Bus-Kereta 0

ಬಸ್ ಕೆರೆತ !

ಮೂರು ವರ್ಷದ ಹಿಂದೆ ಹಿಂಗೊಂದು ಘಟನೆ ಆಗಿತ್ತು ಅಂತ ಫೇಸ್-ಬುಕ್ ಅಲ್ಲಿ ಬರ್ದಿದ್ದೆ! ~~~~ ಕೆಲವ್ರಿಗೆ ಬೈಬೇಕೋ, ಮೆಟ್ಟು ತಗೊಂಡು ಹೊಡೀಬೇಕೋ ಗೊತಾಗಲ್ಲ!! ಇವತ್ತು ಬೆಳ್ಗೆ ಬಸ್ಸಲ್ಲಿ ಸದಾಶಿವನಗರದ ಕಡೆಯಿಂದ ಮೆಜೆಸ್ಟಿಕ್ಕಿಗೆ ಬರ್ಬೇಕಾದ್ರೆ ಪಕ್ಕದಲ್ಲಿ ಯಾರೋ ಒಬ್ಬ ಬಂದು ಕೂತ(ಆತ ನಂಗಿಂತ ಐದಾರು ವರ್ಷ ದೊಡ್ಡವ್ನಾಗಿದ್ರೂ ಬಹುವಚನ ಉಪಯೋಗಿಸಬೇಕು ಅನ್ನಿಸ್ತಿಲ್ಲ !!). ಕೂರ್ತಿದ್ದ ಹಾಗೇ ಮೊಬೈಲ್ ತೆಗೆದು ತಮಿಳಿನಲ್ಲಿ ಜೋರಾಗಿ ಮಾತಾಡೋಕೆ ಶುರು ಮಾಡ್ದ. ಅವ್ನು ಮಾತಾಡೋ ರೀತಿ ನೋಡಿದ್ರೆ ಅವ್ನು...

naa-ee-sanjege-and-munjaane-manjalli 0

ನಾ ಈ ಸಂಜೆಗೆ ಮತ್ತು ಮುಂಜಾನೆ ಮಂಜಲ್ಲಿ

ನಾ ಈ ಸಂಜೆಗೆ… ಮುಂಜಾನೆ ಮಂಜಲ್ಲಿ… ಇವೆರಡೂ ನನ್ನ ಇಷ್ಟವಾದ ಹಾಡುಗಳು. ಕೇಳ್ತಾ ಕೇಳ್ತಾ ನಿಧಾನವಾಗಿ ಮನಸಿನ ಒಳಗೆ ಇಳಿಯುವ ಹಾಡುಗಳು. ನಾ ಮನೆಯಲ್ಲಿ ಸುಮ್ಮನೆ ಕೂತು ಗುನುಗ್ತಾ ಇದ್ದಾಗ ಇವೆರಡನ್ನೂ ಹೀಗೆ ಸೇರಿಸಿ ಹೇಳ್ಬೋದು ಅನಿಸ್ತು. ನನ್ ಹತ್ರ ಮಾಮೂಲಿಯಾಗಿರೋ ಒಂದು ಆಡಿಯೋ ಮೈಕ್ ಇದೆ, ಅದನ್ನ ನನ್ನ ಕ್ಯಾಮರಾ ಗೆ ಚುಚ್ಚಿ, ರೆಕಾರ್ಡ್ ಮಾಡಿದೆ. ಕ್ಯಾಮರಾ ಹಿಂದೆ ನನ್ನ ಹೈಸ್ಕೂಲ್ ಕ್ಲಾಸ್ಮೇಟ್, ಈಗ ರೂಮ್ಮೇಟ್ ಆಗಿರೋ ರವೀಂದ್ರ...

bhaavane 0

ಭಾವನೆ

ಈ ಭಾವನೆಗಳೆ ಹೀಗೆ ಕೆಲವೊಮ್ಮೆ ಸರಾಗದ ಜಲಪಾತ ಮರುಘಳಿಗೆ ಬೆಟ್ಟದಂತೆ ನಿಶ್ಚಲ ಆಗಾಗ ಉನ್ಮತ್ತ, ನಿಂದನೆಗೆ ಕುಂಠಿತ, ಬೇಜಾರಿನ ಮೊರೆತ ಆನಂದಕೆ ಆಹ್ಲಾದ, ಕೆಣಕಿದರೆ ಕ್ರೋಧ, ಸಾವಿಗೂ ಸಿದ್ಧ ಗೆಲ್ಲುವ ಗರ್ವ, ಕೊನೆಯಿರದ ಪರ್ವ ಚಿಂತನ, ಮಂಥನ, ಸಮಕಾಲೀನ, ಆಪ್ಯಾಯಮಾನ ಈ ಭಾವನೆಗಳೆ ಹೀಗೆ ಕೆಲವೊಮ್ಮೆ ತಿಳಿಯಲಾಗದ ಅನುಪಾತ ಮರುಘಳಿಗೆ ತಪ್ಪೇ ಮಾಡದಷ್ಟು ನಿರ್ಮಲ

bhale-bhale-chandada 2

ಭಲೆ ಭಲೆ ಚಂದದ ಚಂದುಳ್ಳಿ

ಈ ಹಾಡು ಬಂದಾಗಿಂದಲೂ ಒಂಥರಾ ಇಷ್ಟ ನಂಗೆ. ಹಾಡು – ಭಲೆ ಭಲೆ ಚಂದದ ಚಿತ್ರ – ಅಮೃತವರ್ಷಿಣಿ ಹಾಡಿದವರು – ಎಸ್. ಪಿ. ಬಾಲಸುಬ್ರಮಣ್ಯಂ ಸಂಗೀತ – ದೇವ ಸಾಹಿತ್ಯ – ಕೆ. ಕಲ್ಯಾಣ್ ‘ಭಲೆ ಭಲೆ ಚೆಂದದ ಚೆಂದುಳ್ಳಿ’ Song Lyrics in Kannada ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ….. ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು...

gamanisu-nanna-neenu 4

ಗಮನಿಸು ನನ್ನ ನೀನು

ನಂಗೊಂಥರಾ ಹಂಗೆ! ನಾನು ಓಂದೇ ಸಲ ಕೇಳಿದಾಗ ಇಷ್ಟ ಆಗೋ ಹಾಡು ಆಮೇಲೆ ಕೇಳ್ತಾ ಕೇಳ್ತಾ ಬೇಜಾರು ಬಂದೋಗುತ್ತೆ. ಚನ್ನಾಗಿರೋ ಹಾಡು ಒಂದೇ ಸಲ ಕೇಳಿದಾಗ ಇಷ್ಟ ಆಗಲ್ಲ, ಕೇಳ್ತಾ ಕೇಳ್ತಾ ಇಷ್ಟ ಅಗೋಗುತ್ತೆ. ಈ ಹಾಡು ಕೇಳಿದಾಗ ಅಷ್ಟೇನೂ ಇಷ್ಟ ಆಗಿರ್ಲಿಲ್ಲ. ಆಮೇಲೆ ಇಷ್ಟ ಆಗಿ ಹಾಡು ಹೇಳಿ ರೆಕಾರ್ಡ್ ಕೂಡಾ ಮಾಡಣ ಅನ್ಸಿ ಬಿಡ್ತು. ವೀಡಿಯೋ ರೆಕಾರ್ಡ್ ಮಾಡಣ ಅನ್ಸಿ ಅದುನ್ನು ಮಾಡಿಬಿಟ್ಟೆ. ನೋಡಿ, ಕೇಳಿ… ಹೆಂಗಿದೆ...

imbala 0

​ಹೀಗೊಂದು ಇಂಬಳದ ಕಥೆ !

ಇಲ್ಲಿ ಇರೋ ಬದ್ಲು ಅಲ್ಲಿಗೆ ಹೋದ್ರೆ ಏನಾದ್ರು ಒಂದು ಕೆಲಸ ಸಿಗುತ್ತೆ, ಹೋಗಿ ಹುಡುಕು. ಅಂತ ಮಕ್ಕಳನ್ನ ಬೆಂಗ್ಳೂರಿಗೆ ಕಳಿಸೋ ಅಪ್ಪ-ಅಮ್ಮನ ಥರ ನಮ್ಮೂರಿನ ತೋಟದಲ್ಲಿ ಇರೋ ಇಂಬಳಗಳೂ ತಮ್ಮ ಮಗನನ್ನು ಬೆಂಗ್ಳೂರಿಗೆ ಕಳ್ಸೋ ಪಿಲಾನ್ ಮಾಡಿ ಕರೀ ಶೂ ಹಾಕ್ಕಂಡು ಕೆಂಪು ಬಸ್ ಹತ್ತೋಕೆ ಹೊರಟಿದ್ದ ಒಬ್ಬ ಹುಡುಗನ ಕಾಲಿಗೆ ಹತ್ತಿಸಿ ಟಾಟಾ ಮಾಡಿ ಬಂದ್ವು. ಇತ್ತ ಹುಡುಗನ ಕರೀ ಶೂ, ಕರೀ ಸಾಕ್ಸನ್ನು ದಾಟಿದ ಮರಿ ಇಂಬಳ...

No End 0

ಕೊನೆಯಿಲ್ಲದ್ದು…

ಪ್ರತೀ ಆರಂಭಕ್ಕೂ ಒಂದು ಅಂತ್ಯ ಇರಲೇಬೇಕು ಅಂತಾರಲ್ಲ, ಅದು ನಿಜವೇ ಇರಬೇಕು. ಈ ‘ಕೊನೆ’ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ಅನುಭವ. ಬೇಸರ, ದುಃಖ, ಕೋಪ, ಜಿಜ್ಞಾಸೆ, ಖುಷಿ, ಗೊಂದಲ ಇನ್ನೂ ಏನೇನೋ! ಹೇಳಲಾಗುವಂಥದ್ದು ಕೆಲವು, ಹೇಳಲಾಗದ್ದು ಹಲವು. ನಮಗೆ ತುಂಬಾ ಬೇಕಾದವರು, ಇಷ್ಟವಾದವರು ತೀರಿಕೊಂಡರೆ ಆಗುವ ದುಃಖ ತಡೆಯಲಾರದ್ದು. ಅದೇ ಹಳೆಯ ನೆನಪುಗಳು ಎಷ್ಟೇ ಬೇಡವೆಂದರೂ ಮತ್ತೆ ಮತ್ತೆ ಎದುರಿಗೆ ಬಂದು ದುಃಖ, ಬೇಸರವನ್ನ ಹೆಚ್ಚಿಸಿಬಿಡುತ್ತವೆ. ಯಾರು ಏನೇ ಹೇಳಿದರೂ...

iron box 2

ಐರನ್ ಬಾಕ್ಸ್

ದಿನಾಂಕ 22-12-2014 ರ ಪಂಜುವಿನ ಸಂಚಿಕೆಯಲ್ಲಿ http://www.panjumagazine.com/?p=9586 ~ ಐರನ್ ಬಾಕ್ಸ್ ~ (ಕಾಲ್ಪನಿಕ) ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ ‘ಢಬ್’ ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ...

minchula 2

ಮಿಂಚುಳ

13-07-2014 ರ ಪಂಜು ಅಂತರ್ಜಾಲ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ http://www.panjumagazine.com/?p=7938 ~ ಮಿಂಚುಳ ~ ನವೀನ್ ಸಾಗರ್ ಅವ್ರು ಬರ್ದಿರೋ ‘ಣವಿಣ – ಅಂಗಾಲಲ್ಲಿ ಗುಳುಗುಳು’ ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! ‘ಸಿಲ್ಲಿ-ಲಲ್ಲಿ’ ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು ‘ಜೇಡ ಕಟ್ಟಿರೋ ಮೂಲೆ ನೋಡ್ದೆ’.     ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ...

kaledhode 0

ಕಳೆದ್ಹೋದೆ ಕಳೆದ್ಹೋದೆ!

ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ http://www.panjumagazine.com/?p=7682 ~ ~ ಕಳೆದ್ಹೋದೆ ಕಳೆದ್ಹೋದೆ! ~ ~ ಮರಳ ಮೇಲೆ ಬರೆದರಲೆಯು ತೊಳೆವುದಿಲ್ಲವೇನು? ಎಂದೆನಿಸಿ ಅಲೆಯ ಮೇಲೇ ಬರೆಯಲ್ಹೊರಟೆ ನಾನು ಬರೆದು-ಮುಳುಗಿ, ಬರೆದು-ಮುಳುಗಿ ಕಳೆದ್ಹೋದೆ ಕಳೆದ್ಹೋದೆ! ಬದುಕಬೇಕು, ಬರೆಯಬೇಕು ಎಂದೀಜಿದೆನಲ್ಲ ಮೀನಿಗೋ ನಾನೆ ಹಸಿವು ನನ್ನ ತಿಂದಿತಲ್ಲ! ಉಗುಳಿ-ನುಂಗಿ, ಉಗುಳಿ-ನುಂಗಿ ಕಳೆದ್ಹೋದೆ ಕಳೆದ್ಹೋದೆ! ಮೀನೀಗ ಹಾರುತಿದೆ ಕಡಲ್ಹಕ್ಕಿಯ ಕಾಲಡಿಗೆ! ಸತ್ತ ಮೀನ ಬಾಯ್ತೆರೆದು ಬಂದೆನಾಗ ಹೊರಗೆ ಕಡಲೋ-ನೆಲವೋ, ಕಡಲೋ-ನೆಲವೋ ಕಳೆದ್ಹೋದೆ ಕಳೆದ್ಹೋದೆ!...

hu-anbeku 0

ಹೂಂ ಅನ್ಬೇಕು, ಸುಮ್ನೆ ಕಥೆ ಹೇಳಲ್ಲ !

ಏಪ್ರಿಲ್ ೨೮ ೨೦೧೪ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ http://www.panjumagazine.com/?p=7200 -_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_ ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ ‘ಕಥೆ ಹೇಳಿ’ ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ! ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು!...

ootada-hotte 0

ಊಟದ ಹೊಟ್ಟೆ

ಮಧ್ಯಾಹ್ನ ಊಟದ ಟೈಮು, ಸಿಕ್ಕಾಪಟ್ಟೆ ಹಸಿವಾಗ್ತಿದೆ. Empty mind is Devil’s workshop ಅನ್ನೋ ಗಾದೆ ಗೊತ್ತಿತ್ತು, ಆದ್ರೆ ಎಂಟೀ ಹೊಟ್ಟೆಯಿಂದಾನು ತಲೇಲಿ ಇಂಥ ಪೆಕ್ರು ಪೆಕ್ರು ಯೋಚ್ನೆಗಳು ಬರ್ತವೆ ಅಂತ ಗೊತ್ತಿರ್ಲಿಲ್ಲ. ವಿಸ್ಯ ಏನಪ್ಪಾ ಅಂತಂದ್ರೆ, ನಮ್ಮೆಲ್ರಿಗೂ ಇರೋ ಈ ಹೊಟ್ಟೆ ಅನ್ನೋ ಸಿಮೆಂಟ್ ಕಲ್ಸೋ ಮೆಶೀನಿಗೆ ಸಮಯಕ್ಕೆ ಸರಿಯಾಗಿ ಏನಾದ್ರೂ ಒಂದು ಹಾಕಿಲ್ಲಾ ಅನ್ನೋದು ನಮಗೆ ಮಾತ್ರ ಗೊತ್ತಿದ್ರೆ ನಮಗೇ ಸುಸ್ತಾಗುತ್ತೆ, ಊರವ್ರಿಗೆಲ್ಲಾ ಗೊತ್ತಿದ್ರೆ ಸರ್ಕಾರನೂ ಸುಸ್ತಾಗುತ್ತೆ!...

kalpane-song 0

ಕಲ್ಪನೆ – ನನ್ನ ಮೊದಲ ಹಾಡು

For those who can’t read Kannada, this post is all about my first ever composed song ‘Kalpane’. You can watch the song at the end of this page 🙂 ಕಲ್ಪನೆ – ನನ್ನ ಮೊದಲ ಹಾಡು ಏನಾದ್ರೂ ಒಂದು ಒಳ್ಳೇ ಕೆಲಸ ಮಾಡಬೇಕು ಅಂತ ಮಾಡಕ್ಕೋಗಿ, ಅದು ಇನ್ನೇನೋ ಆಗಿ ಇನ್ನೊಂದು ಥರದಲ್ಲಿ ಒಳ್ಳೇದು ಆಗತ್ತೆ ಅನ್ನೋದಕ್ಕೆ ಈ...

shikshakarigondu 0

ಶಿಕ್ಷಕರಿಗೊಂದು ಸೆಲ್ಯೂಟ್

೭-೧೦-೨೦೧೩ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ http://www.panjumagazine.com/?p=4499 ~ ಶಿಕ್ಷಕರಿಗೊಂದು ಸೆಲ್ಯೂಟ್ ~ ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ. ಒಂದು...

dadda-boogu-kattidaaga 0

ದದ್ದ ಬೂಗು ಕಟ್ಟಿದಾಗ !

ಜುಲೈ-1-2013ರ ‘ಪಂಜು’ ಅಂತರ್ಜಾಲ ವಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ ! http://www.panjumagazine.com/?p=2960 ದದ್ದ ಬೂಗು ಕಟ್ಟಿದಾಗ !   ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್...

modala-sooryodaya 0

ಮೊದಲ ಸೂರ್ಯೋದಯ

ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ http://www.panjumagazine.com/?p=2100 ~ ಮೊದಲ ಸೂರ್ಯೋದಯ ~ (ವಿ.ಸೂ.ಈ ಕಥೆಯಲ್ಲಿ ಬರುವ ಎಲ್ಲಾ ಜಾಗ ಹಾಗೂ ಪಾತ್ರಗಳು ಕೇವಲ ಕಾಲ್ಪನಿಕ!) ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ...

thirthalli-holi 1

ತೀರ್ಥಹಳ್ಳಿಯಲ್ಲೊಂದು ಹೋಳಿ

ದಾರೀಲಿ ಸಿಕ್ಕಿದವರೆಲ್ಲಾ ನಮಗೆ ಬಣ್ಣ ಹಾಕ್ತಾರೆ ಅನ್ಕೊಂಡು ಸ್ವಲ್ಪ ಡಾರ್ಕ್ ಕಲರ್ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಹೊರ್ಟಿದ್ವಿ. ಆಗ ನಾವಿನ್ನೂ ಡಿಪ್ಲೋಮಾ ಎರಡನೇ ಸೆಮಿಸ್ಟರ್ ನಲ್ಲಿ ಓದ್ತಾ ಇದ್ದಿದ್ರಿಂದ ಕಾಲೇಜಿಗೆ ಹೋಗೋದು ತಪ್ಪಿಸ್ತಿದ್ದಿದ್ದು ಕಡಿಮೆ. ಕಾಲೇಜಿನಲ್ಲಿ ಬೇರೆ ಎಲ್ಲಾ ಕ್ಲಾಸ್ ಗಳಲ್ಲಿ ಮುಖಕ್ಕೆಲ್ಲ ಬಣ್ಣ ಬಳ್ಕೊಂಡು ಓಡಾಡ್ತಿದ್ರೂ ನಮ್ಮ ಕ್ಲಾಸಲ್ಲಿರೋ ಯಾರಿಗೂ ಅದ್ಯಾಕೋ ಹೋಳಿ ಆಡೋ ಮನಸೇ ಆಗಿರ್ಲಿಲ್ಲ ( ಅಥವಾ ಆ ರೀತಿ ನಟಿಸುತ್ತಿದ್ದರು !).ಮಧ್ಯಾನ್ಹ ಕ್ಲಾಸ್ ಮುಗೀತು,...

dayavittu-kshamisi 0

ದಯವಿಟ್ಟು ಕ್ಷಮಿಸಿ

ಕೆಲ ದಿನಗಳ ಹಿಂದೆ ಡೆಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಡೆಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆ ಬೆಳಿಗ್ಗೆ ಆ ಯುವತಿ ತೀರಿಕೊಂಡಮೇಲಂತೂ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಶ್ನೆ “ಆ ಕ್ರೂರ ಅತ್ಯಾಚಾರಿಗಳಿಗೆ ಶಿಕ್ಷೆ ಯಾವಾಗ?” ಅಂತ. ಸದ್ಯದ ಮಟ್ಟಿಗೆ ಆ ಪ್ರಶ್ನೆ, ಅದಕ್ಕೆ ಆದಷ್ಟು ಬೇಗ ಸರ್ಕಾರದಿಂದ ಉತ್ತರ ಪಡೆಯಬೇಕೆಂಬ ಹಂಬಲ ಸರಿಯೇ ಆಗಿದ್ದರೂ, ಅಷ್ಟರಿಂದಲೇ ಮುಂದಾಗಬಹುದಾದ ಈ ರೀತಿಯ...

hosatella-haleyade 0

ಹೊಸತೆಲ್ಲಾ ಹಳೆಯದೇ !

ಹೊಸತು ಪೂರ್ಣಚಂದ್ರತೇಜಸ್ವಿಯವರ “ನಿಗೂಢ ಮನುಷ್ಯರು” ಓದಿದ ಮೇಲೆ ಅದ್ಯಾಕೋ ಯೋಗರಾಜ್ ಭಟ್ಟರ “ಮನಸಾರೆ” ಚಲನಚಿತ್ರ ನೆನಪಾಗ್ತಾ ಇದೆ. ಇವರಿಬ್ಬರೂ ಹೇಳೋಹಾಗೆ ಯಾವುದೂ ಹೊಸತರಂತೆ ಕಾಣುತ್ತಿಲ್ಲ ! ಬೈಕ್ ಓಡಿಸೋಕೆ ಕಲಿಯೋದು ಹೊಸತಲ್ಲ, ಮನೆ ಕಟ್ಟೋದು ಹೊಸತಲ್ಲ (ಹೊಸ ರೀತಿ ಕಟ್ಟಿದರೂ ಕಟ್ಟುವ ಕ್ರಿಯೆಗೆ ‘ಮನೆ ಕಟ್ಟೋದು’ ಅಂತಾನೇ ತಾನೆ ಕರೆಯೋದು). ಇದೇ ರೀತಿ ಇನ್ನೂ ಪಟ್ಟಿ ಮಾಡಬಹುದು. ಕೊನೆಗೆ ಮೇಲೆ ಹೇಳಿದ ರೀತಿ “ಯಾವುದೂ ಹೊಸತಲ್ಲ” ಅನ್ನೋದೂ ಕೂಡ ‘ಭಟ್ಟರು’ ಹೇಳಿಯಾಗಿದೆ....

lo-maccha-mattu-kempu-hallu 0

“ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” : ಒಂದು ಕಥೆ

ಮೊನ್ನೆ ಬೆಳಿಗ್ಗೆ ಮುಂಚೆ 5:30 ರ ಸುಮಾರಿಗೆ ಮಲಗಿದವನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಕಾರಣ ಒಂದು ಕೆಟ್ಟ  ಕನಸು! ಆ ಕನಸಿಗೆ, ಎಚ್ಚರವಿರುವಾಗ ಇನ್ನಷ್ಟು ಯೋಚನೆಯನ್ನು ಬೆರೆಸಿ ಈ “ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” ಎಂಬ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಪುರಸೊತ್ತಿದ್ದರೆ ಒಮ್ಮೆ ಓದಿಬಿಡಿ ! “ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” ಟ್ನಿಕ್ ಟಿಕ್ ಟಿಕ್ ಟಿಕ್ ಟ್ನಿಕ್ ಟಿಕ್ ಟಿಕ್ ….. ಟ್ರೀ ಟುಕ್ ಟುಕ್ ಟ್ರೀ...

ayaskaanta 2

ಆಯಸ್ಕಾಂತ

“ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ”, “ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು”, “ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು” ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ...

giliraaya 0

ಗಿಳಿರಾಯ

  ಮಳೆರಾಯನಾರ್ಭಟಕೆ ಸಿಕ್ಕನೋ ಗಿಳಿರಾಯ ಕಂದನಿಗಾಹಾರ ತರುತಲಿರುವಾಗ ಆಗಿದೆ ಕಾಲಿನಾ ಬುಡದಲ್ಲಿ ಗಾಯ ಹಾರುವುದಕದರಿಂದ ತೊಂದರೆಯು ಈಗ ಕಂದನಾ ನೆನೆಯುತಿರೆ ನೋವೆಲ್ಲ ಮಾಯ ಕತ್ತಲಾ ಸೆರಗಲಿ ಇಮ್ಮಡಿಸಿದೆ ವೇಗ ಇತ್ತಕಡೆ ಮರಿ ಗಿಳಿಗೆ ಗುಡುಗು-ಸಿಡಿಲಿನಾ ಭಯ ಮೈಯೆಲ್ಲ, ಗೂಡೆಲ್ಲ ಒದ್ದೆಯಾ ಭಾಗ ಮಿಂಚೊಂದು ಹೊಂದಿದೆ ಅಂಕು-ಡೊಂಕು ಮೈಯ್ಯ ಗಿಳಿಗೂಡ ಸವರಿತು ತನ್ನಯ ತರಂಗ ತಲುಪಿದನು ತನ ಗೂಡ ನಮ್ಮ ಗಿಳಿರಾಯ ಗೂಡು, ಕಂದಗಳೆರಡು ನೆಲದಲ್ಲಿ ಲಾಗ ಎತ್ತುತಾ ಕಂದನಾ, ಮೀರದೆಯೇ...

jeevigalu 1

“ಜೀವಿಗಳು” – ಒಂದು ಕಥೆ

“ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ.” “ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?” “ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ.” “ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?” “ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?” “ಬಿಡಲ್ಲ. ಏನಿವಾಗ?” “ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ...

parisara-dina 0

ಪರಿಸರ ದಿನ

  ಇವತ್ತು ವಿಶ್ವ ಪರಿಸರ ದಿನ ಅಂತ ಗೊತ್ತಾದ ಕೂಡಲೇ ನನಗೆ ನೆನಪಾದ ಘಟನೆ ! ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ  ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ “ಅಮ್ಮಾ! ಏನಾದ್ರು  ಕೊಡ್ಸೆ?” ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ...

purule-hakki 1

ಪುರುಳೆ ಹಕ್ಕಿ !

  ನನಗೆ ಈ ಕಥೆಯ ಮೂಲ ಯಾವುದು ಅಂತ ಗೊತ್ತಿಲ್ಲ. ನಾನು ಕೇಳಿದ್ದು ಮಾತ್ರ ೧೬ – ೧೭ ವರ್ಷದವನಾಗಿದ್ದಾಗ ನನ್ನ ಸೋದರಮಾವನಿಂದ. ಅದೂ ಅವರ ಮಗ ಸಣ್ಣವನಿದ್ದಾಗ ನಿದ್ದೆ ಮಾಡಿಸಲು ಹೇಳುವಾಗ ಕದ್ದು ಕೇಳಿಸಿಕೊಂಡಿದ್ದು ! ಇದರ ಸಾರಾಂಶ, ಸಂದೇಶ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇಲ್ಲಿಂದ ಮುಂದೆ ಕಥೆ, ನಾನು ಕೇಳಿಸಿಕೊಂಡಂತೆ, ನನಗೆ ನೆನಪಿದ್ದಂತೆ, ಅದರದೇ ಆದ ಧಾಟಿಯಲ್ಲಿ ! ~~ ಪುರುಳೆ ಹಕ್ಕಿ ~~   ಒಂದು ದೊಡ್ಡ ಕಾಡಲ್ಲಿ...

modala-male 0

ಮೊದಲ ಮಳೆ

ದ್ವೀಪದಲ್ಲೊಂದು ಮರ ಮರದ ಮೇಲೊಂದು ಹಕ್ಕಿ ಹಕ್ಕಿಯ ಬಾಯಲ್ಲಿ ಗೆದ್ದಲು ಗೂಡಿನಲ್ಲುಳಿದ ಗೆದ್ದಳುಗಳಿಗೆ ತಾವು ಉಳಿದೆವೆಂಬ ಖುಷಿ ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ ಮರಕ್ಕೆ ಹಕ್ಕಿ, ಗೆದ್ದಲು ಸೇರಿ ತನ್ನ ತಿಂದಾವೆಂಬ ಭಯ ಇದ್ದಕ್ಕಿದ್ದಂತೆ ಪಟಪಟನೆ ಗೆದ್ದಲು ಗೂಡಿನ ಮೇಲೆ ಬಿದ್ದ ಮಳೆಹನಿ ಗೆದ್ದಲುಗಳಿಗೆ ತಮ್ಮ ಗೂಡು ಹಾಳಾದೀತೆಂಬ ಭಯ ಹಕ್ಕಿಗೆ ತನ್ನ ಮಕ್ಕಳು ಒದ್ದೆ ಆದಾವೆಂಬ ಭಯ ಮರಕ್ಕೆ ತಾನು ಸ್ವತಂತ್ರನಾಗುವೆನೆಂಬ ಖುಷಿ ಮೊದಲ ಮಳೆಯ ಖುಷಿ 🙂

baalya-snehita 0

ಬಾಲ್ಯ ಸ್ನೇಹಿತ

ನಾವೇನೂ ಮೂರು ಹೊತ್ತೂ ಒಟ್ಟಿಗೆ ಇರುತ್ತಾ ಇದ್ದ ಸ್ನೇಹಿತರಲ್ಲ. ಆದರೆ ಯಾವ ಹೊತ್ತಲ್ಲಿ ಸಿಕ್ಕಿದರೂ ಜಗಳ ಆಡಿದವರಲ್ಲ. ಕ್ರಿಕೆಟ್ ಅನ್ನೋ ಆಟವನ್ನ ಹೆಚ್ಚು ಕಡಿಮೆ ದಿನಾ ಆಡ್ತಾ ಇದ್ವಿ ಅಲ್ವನೋ? ನನಗೂ ನಿನಗೂ ವಯಸ್ಸಲ್ಲಿ ಬರೀ ಮೂರ್ನಾಲ್ಕು ತಿಂಗಳುಗಳ ಅಂತರವಿದ್ದಿದ್ದರಿಂದಲೋ ಏನೋ  ನಮ್ಮ ಯೋಚನೆಗಳು ಒಂದೇ ದಿಕ್ಕಿನಲ್ಲಿರುತ್ತಿದ್ದವು. ನಿನಗೂ ಗೊತ್ತು, ನಮಗಿಂತ ಮೊದಲು ನಿನ್ನ ಮತ್ತು ನನ್ನ ಅಪ್ಪ ಸ್ನೇಹಿತರು. ಯಾವಾಗಲೋ ಒಮ್ಮೆ ನಿಮ್ಮ ಅಪ್ಪ ನಮ್ಮ ಅಪ್ಪನ ಬಳಿ ಹೇಳಿದ ನೆನಪು “ನಮ್ಮಿಬ್ಬರ ಥರಾನೆ...

nanmansu 0

The Song :ನಿನ್ನಯ ನನ್ನಯ ಕಲಹ

The lines in my vision for the song “Ellello Oduva Manase” from the movie “Sidlingu” (Kannada). We are presenting the brand new song As Promised in our earlier song ! Let us know what you expect in the future ! Looking forward to ur feedback Thanks ♥ All. ನಿನ್ನಯ  ನನ್ನಯ...

nanmansu 2

Inspirational Quotes !

Looking at your ‘Aim’ will get you nothing, you have to throw an arrow towards it! …………………………………………………………………………………………………………………….. Share the happiness, leave your sorrow! Live today, forget tomorrow …………………………………………………………………………………………………………………….. You might be facing 1991 problems, but at the end of the day, only thing that matters is “what you have learned...

nanmansu 2

Quotes By Experience !

1) Either you dance, sing a song, play guitar, take a picture, paint something, write a poem, play sports or do whatever you want; People think you are awesome only when they can’t understand what you are doing or when they really can’t do what exactly you are doing. …………………………………………………………………………………………………………………….....

nanmansu 0

My only SWEETEST HEART

Dedicated to my only SWEETEST HEART,my buddy “Pakru”. I LOVE DOG 🙂 Because he is not like humans ! He lives his life so happily. BITES the 1 who’s irritating him with no mercy. CRIES when he’s alone. Shows his LOVE by licking you. SHOUTS if he don’t like something....

nanmansu 4

ಚಿತ್ರಾನ್ನ ? ಬರ್ಗರ್ ?

ಹೌದು, ಹೌದು, ಹೌದು. ಇಲ್ಲ ಇಲ್ಲ ಇಲ್ಲ . ಇದ್ರೂ ಇರಬಹುದೇನೋ! ಸುಮ್ಮನೆ ಇದೇ ಥರ ಗೊಂದಲದಲ್ಲಿ ಇಷ್ಟು ದಿನ ಕಳೆದೆನಲ್ಲ ಅಂತ ಬೇಜಾರೇನೂ ಇಲ್ಲ . ಆ ಥರ ಇದ್ದಿದ್ದಕ್ಕೆ ಇನ್ನು ಮೇಲೆ ಆ ಥರ ಇರಬಾರದು ಅಂತ ಗೊತ್ತಾಗಿದ್ದು ತಾನೆ ? ಅವೆಲ್ಲಾ ಇರಲಿ ಈಗ ವಿಷಯಕ್ಕೆ ಬರೋಣ ! ಜೀವನವನ್ನು ಯಾವುದಕ್ಕೆ ಹೋಲಿಸಬಹುದು ?! ಹಿಂದಿನ ಕಾಲದ ಜ್ಞಾನಿಗಳು ಜೀವನದ ಕಷ್ಟ ಸುಖಗಳನ್ನು ಹಗಲು/ರಾತ್ರಿಗೋ, ಹರಿಯುವ...

nanmansu 0

Facebook ಒಳ್ಳೆಯದೋ? ಕೆಟ್ಟದ್ದೋ?!

“ಹೇಯ್ ಮಗಾ ಅವತ್ತು ರಾಕೇಶ್ ಹತ್ರ ಮಾತಾಡ್ದೆ ಕಣೋ! ಡೆಲ್ಲಿಲಿ ಇದಾನಂತೆ ಈಗ.” “ಅವ್ನ mobile number ಹೆಂಗೋ ಸಿಕ್ತು ನಿಂಗೆ?” “Facebook ಅಲ್ಲಿ ಇದಾನೆ ಮಗಾ! ಹೇಗ್ ಆಗಿದಾನೆ ಗೊತ್ತ ಈಗ? ನನ್ profile ಅಲ್ಲಿ ಇದಾನೆ ನೋಡು” “ಏನ್ ಗೊತ್ತ? ನಿನ್ನೆ ನಾನು ಪ್ರವೀಣ್ ಜೊತೆ coffee dayಗೆ ಹೋಗಿದ್ದೆ, ಎಷ್ಟು ಒಳ್ಳೆಯವನು ಗೊತ್ತ ಅವ್ನು? ತುಂಬಾ care ಮಾಡ್ತಾನೆ ಕಣೆ” “ಹೌದ? ಅಲ್ವೇ ಈ ಪ್ರವೀಣ್...

nanmansu 0

~MY NATIVE~

This was the very First Poem I had written when I heard someone praising our native “Koppa, Chickamagalur, Karnataka, India”. Sorry for Grammatical Mistakes. Read at your own risk ! NATURE IS VERY CALM, JUST LIKE MY MOM!       IN A VERY COLD AIR, SIT IN FRONT OF BATHROOM’S...

nanmansu 2

ಸುಮ್ನೆ ಒಂದಷ್ಟು ಕವಿತೆ !

೧) ದಂಗೆ ದಂಗೆ ಏಳಬೇಕಂತೆ ಮಳೆ ಸುರಿದ ಹಾಗೆ ಮರಗಳನು ಕಡಿದು ಹೆಚ್ಚುತಿರೆ ಬೇಗೆ ನಿಂತ ನೀರು ಚಲಿಸಲಿ ಮಳೆ ಮುತ್ತಿನಿಂದ ಇಷ್ಟೆಲ್ಲಾ ಆದ್ಮೇಲಾದ್ರೂ ಸೋಲಾರ್ ಉಪಕರಣಗಳ ಬಳಸೋಣ ಕಂದ …………………………………………………………………….. ೨) ಹೊಸತು ಹೊಸತೆನ್ನುವ ಪದ ಹಳೆಯದೇ ಹೊಸತನ್ನು ಹುಡುಕುವ ಕ್ರಿಯೆ ಹಳೆಯದೇ ಏನನ್ನೂ ತಿಳಿಯದೇ ಯೋಚಿಸುವುದೆಲ್ಲಾ ಹೊಸದೇ …………………………………………………………………….. ೩) ಏಕೆ? ನೀ ಎದುರಿಗೆ ಸಿಕ್ಕಾಗ ನಾ ತಪ್ಪಿಸಿಕೊಂಡರೂ ಮತ್ತೆ ನಿನ್ನ ನೋಡಬೇಕೆನಿಸುತ್ತಿದೆಯೇಕೆ? ನೀ ನನಗೆ ಬಯ್ಯುವಾಗ...

muddu-muddu-amma 0

ಮುದ್ದು ಮುದ್ದು ಅಮ್ಮ :)

ತಡವಾಗಿ ಬಂದಾಗ ಸುಮ್ನಿರ್ತೀಯ. ರೆಟ್ಟೆ ಹಿಡಿದು ‘ಯಾಕೆ ತಡ?’ ಕೇಳೋದಲ್ವ ?       ನನ್ನ ತಲೆಗೆ ಎಣ್ಣೆ ಹಾಕಿ ತಟ್ತಿರ್ತೀಯ.       ‘ನೀನೆ ಹಾಕ್ಕೋ ಹೋಗು’ ಅಂತ ಬಯ್ಯೋದಲ್ವ? ಬಟ್ಟೆ ಕೊಳೆ ಆದಾಗ ತೊಳೆದು ಹಾಕ್ತಿಯ. ‘ತೊಳಿ’ ಅಂತ ನನ್ನ ಮುಖಕೆ ಎಸೆಯೋದಲ್ವ?        ತಿರುಗಿ ಹೋಗುವಾಗ ಮೂಟೆ ತಿಂಡಿ ಕೊಡ್ತಿಯ.        ‘ಅಲ್ಲಿ ಹೇಗೂ ಹೋಟೆಲ್ ಇದೆ’...