Tagged: kannada stories

hu-anbeku 0

ಹೂಂ ಅನ್ಬೇಕು, ಸುಮ್ನೆ ಕಥೆ ಹೇಳಲ್ಲ !

ಏಪ್ರಿಲ್ ೨೮ ೨೦೧೪ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ http://www.panjumagazine.com/?p=7200 -_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_ ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ ‘ಕಥೆ ಹೇಳಿ’ ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ! ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು!...

ootada-hotte 0

ಊಟದ ಹೊಟ್ಟೆ

ಮಧ್ಯಾಹ್ನ ಊಟದ ಟೈಮು, ಸಿಕ್ಕಾಪಟ್ಟೆ ಹಸಿವಾಗ್ತಿದೆ. Empty mind is Devil’s workshop ಅನ್ನೋ ಗಾದೆ ಗೊತ್ತಿತ್ತು, ಆದ್ರೆ ಎಂಟೀ ಹೊಟ್ಟೆಯಿಂದಾನು ತಲೇಲಿ ಇಂಥ ಪೆಕ್ರು ಪೆಕ್ರು ಯೋಚ್ನೆಗಳು ಬರ್ತವೆ ಅಂತ ಗೊತ್ತಿರ್ಲಿಲ್ಲ. ವಿಸ್ಯ ಏನಪ್ಪಾ ಅಂತಂದ್ರೆ, ನಮ್ಮೆಲ್ರಿಗೂ ಇರೋ ಈ ಹೊಟ್ಟೆ ಅನ್ನೋ ಸಿಮೆಂಟ್ ಕಲ್ಸೋ ಮೆಶೀನಿಗೆ ಸಮಯಕ್ಕೆ ಸರಿಯಾಗಿ ಏನಾದ್ರೂ ಒಂದು ಹಾಕಿಲ್ಲಾ ಅನ್ನೋದು ನಮಗೆ ಮಾತ್ರ ಗೊತ್ತಿದ್ರೆ ನಮಗೇ ಸುಸ್ತಾಗುತ್ತೆ, ಊರವ್ರಿಗೆಲ್ಲಾ ಗೊತ್ತಿದ್ರೆ ಸರ್ಕಾರನೂ ಸುಸ್ತಾಗುತ್ತೆ!...

modala-sooryodaya 0

ಮೊದಲ ಸೂರ್ಯೋದಯ

ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ http://www.panjumagazine.com/?p=2100 ~ ಮೊದಲ ಸೂರ್ಯೋದಯ ~ (ವಿ.ಸೂ.ಈ ಕಥೆಯಲ್ಲಿ ಬರುವ ಎಲ್ಲಾ ಜಾಗ ಹಾಗೂ ಪಾತ್ರಗಳು ಕೇವಲ ಕಾಲ್ಪನಿಕ!) ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ...

thirthalli-holi 1

ತೀರ್ಥಹಳ್ಳಿಯಲ್ಲೊಂದು ಹೋಳಿ

ದಾರೀಲಿ ಸಿಕ್ಕಿದವರೆಲ್ಲಾ ನಮಗೆ ಬಣ್ಣ ಹಾಕ್ತಾರೆ ಅನ್ಕೊಂಡು ಸ್ವಲ್ಪ ಡಾರ್ಕ್ ಕಲರ್ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಹೊರ್ಟಿದ್ವಿ. ಆಗ ನಾವಿನ್ನೂ ಡಿಪ್ಲೋಮಾ ಎರಡನೇ ಸೆಮಿಸ್ಟರ್ ನಲ್ಲಿ ಓದ್ತಾ ಇದ್ದಿದ್ರಿಂದ ಕಾಲೇಜಿಗೆ ಹೋಗೋದು ತಪ್ಪಿಸ್ತಿದ್ದಿದ್ದು ಕಡಿಮೆ. ಕಾಲೇಜಿನಲ್ಲಿ ಬೇರೆ ಎಲ್ಲಾ ಕ್ಲಾಸ್ ಗಳಲ್ಲಿ ಮುಖಕ್ಕೆಲ್ಲ ಬಣ್ಣ ಬಳ್ಕೊಂಡು ಓಡಾಡ್ತಿದ್ರೂ ನಮ್ಮ ಕ್ಲಾಸಲ್ಲಿರೋ ಯಾರಿಗೂ ಅದ್ಯಾಕೋ ಹೋಳಿ ಆಡೋ ಮನಸೇ ಆಗಿರ್ಲಿಲ್ಲ ( ಅಥವಾ ಆ ರೀತಿ ನಟಿಸುತ್ತಿದ್ದರು !).ಮಧ್ಯಾನ್ಹ ಕ್ಲಾಸ್ ಮುಗೀತು,...

jeevigalu 1

“ಜೀವಿಗಳು” – ಒಂದು ಕಥೆ

“ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ.” “ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?” “ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ.” “ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?” “ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?” “ಬಿಡಲ್ಲ. ಏನಿವಾಗ?” “ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ...

parisara-dina 0

ಪರಿಸರ ದಿನ

  ಇವತ್ತು ವಿಶ್ವ ಪರಿಸರ ದಿನ ಅಂತ ಗೊತ್ತಾದ ಕೂಡಲೇ ನನಗೆ ನೆನಪಾದ ಘಟನೆ ! ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ  ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ “ಅಮ್ಮಾ! ಏನಾದ್ರು  ಕೊಡ್ಸೆ?” ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ...

purule-hakki 1

ಪುರುಳೆ ಹಕ್ಕಿ !

  ನನಗೆ ಈ ಕಥೆಯ ಮೂಲ ಯಾವುದು ಅಂತ ಗೊತ್ತಿಲ್ಲ. ನಾನು ಕೇಳಿದ್ದು ಮಾತ್ರ ೧೬ – ೧೭ ವರ್ಷದವನಾಗಿದ್ದಾಗ ನನ್ನ ಸೋದರಮಾವನಿಂದ. ಅದೂ ಅವರ ಮಗ ಸಣ್ಣವನಿದ್ದಾಗ ನಿದ್ದೆ ಮಾಡಿಸಲು ಹೇಳುವಾಗ ಕದ್ದು ಕೇಳಿಸಿಕೊಂಡಿದ್ದು ! ಇದರ ಸಾರಾಂಶ, ಸಂದೇಶ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇಲ್ಲಿಂದ ಮುಂದೆ ಕಥೆ, ನಾನು ಕೇಳಿಸಿಕೊಂಡಂತೆ, ನನಗೆ ನೆನಪಿದ್ದಂತೆ, ಅದರದೇ ಆದ ಧಾಟಿಯಲ್ಲಿ ! ~~ ಪುರುಳೆ ಹಕ್ಕಿ ~~   ಒಂದು ದೊಡ್ಡ ಕಾಡಲ್ಲಿ...

baalya-snehita 0

ಬಾಲ್ಯ ಸ್ನೇಹಿತ

ನಾವೇನೂ ಮೂರು ಹೊತ್ತೂ ಒಟ್ಟಿಗೆ ಇರುತ್ತಾ ಇದ್ದ ಸ್ನೇಹಿತರಲ್ಲ. ಆದರೆ ಯಾವ ಹೊತ್ತಲ್ಲಿ ಸಿಕ್ಕಿದರೂ ಜಗಳ ಆಡಿದವರಲ್ಲ. ಕ್ರಿಕೆಟ್ ಅನ್ನೋ ಆಟವನ್ನ ಹೆಚ್ಚು ಕಡಿಮೆ ದಿನಾ ಆಡ್ತಾ ಇದ್ವಿ ಅಲ್ವನೋ? ನನಗೂ ನಿನಗೂ ವಯಸ್ಸಲ್ಲಿ ಬರೀ ಮೂರ್ನಾಲ್ಕು ತಿಂಗಳುಗಳ ಅಂತರವಿದ್ದಿದ್ದರಿಂದಲೋ ಏನೋ  ನಮ್ಮ ಯೋಚನೆಗಳು ಒಂದೇ ದಿಕ್ಕಿನಲ್ಲಿರುತ್ತಿದ್ದವು. ನಿನಗೂ ಗೊತ್ತು, ನಮಗಿಂತ ಮೊದಲು ನಿನ್ನ ಮತ್ತು ನನ್ನ ಅಪ್ಪ ಸ್ನೇಹಿತರು. ಯಾವಾಗಲೋ ಒಮ್ಮೆ ನಿಮ್ಮ ಅಪ್ಪ ನಮ್ಮ ಅಪ್ಪನ ಬಳಿ ಹೇಳಿದ ನೆನಪು “ನಮ್ಮಿಬ್ಬರ ಥರಾನೆ...