ಮಳೆಗಾಲದ ಮಲೆನಾಡು
ಚಿಕ್ಕವನಿದ್ದಾಗ ನನ್ನ ಪಾಲಿಗೆ ಮಳೆಗಾಲ ಶುರು ಆಗ್ತಿದ್ದಿದ್ದು ಮನೆಯ ಪಕ್ಕ, ಮನೆಗಿಂತಲೂ ಎತ್ತರ ಇರೋ ಮಣ್ಣಿನ ಧರೆಯ ಮಣ್ಣು ಜರಿದು, ಅದರ ಕೆಳಗಿರುವ ನೀರಿನ ಕಾಲುವೆ ಮುಚ್ಚಿದಾಗ. ಜರಿದ ಮಣ್ಣನ್ನು ತೆಗೆದು ಕಾಲುವೆಯಲ್ಲಿ ನೀರು ಹೋಗುವಂತೆ ಮಾಡದಿದ್ದರೆ, ಕಾಲುವೆಯ ನೀರೆಲ್ಲಾ ಮನೆಯ ಅಂಗಳಕ್ಕೆ ಬರುತ್ತಿತ್ತು. ಅಪ್ಪ ಹಾರೆ, ಗುದ್ದಲಿ ಜೊತೆಗೆ ಕಾಲುವೆಯ ಮಣ್ಣು ತೆಗೆಯಲು ಹೊರಟರೆ ನಾನೂ ಅಪ್ಪನೊಟ್ಟಿಗೆ ಏನೋ ಬಹಳ ಕೆಲಸ ಮಾಡುವವನ ಥರ ಹೋಗ್ತಿದ್ದೆ. ಆದರೆ ನನಗೆ...