ತೊಂದರೆ

tondare

ಕಾಲ್ಬೆರಳ ಸಂದೀಲಿ ಸಿಗೋ ಕಲ್ಲುtondare
ಪೆನ್ನಿನ ತುದೀಲಿ ಹೆಚ್ಚಾಗಿರೋ ಇಂಕು
ತಲೆ ಮಧ್ಯ ಕಾಣೋ ಬಿಳಿ ಕೂದಲು
ಮೂಗಿನ ತುದೀಲಿ ಎದ್ದಿರೋ ಗುಳ್ಳೆ
ಪ್ಯಾಂಟಿನ ಜೇಬಲ್ಲಿ ಸಿಗೋ ಹಳೇ ಬಿಲ್ಲು
ಇನ್ನೂ ನೇತಾಡ್ತಾ ಇರೋ ಹಿಂದಿನ ವರ್ಷದ ಕ್ಯಾಲೆಂಡರ್
ಹಲ್ಲಿನ ಮಧ್ಯ ಸಿಗೋ ಬಾಳೇಕಾಯಿ ಚಿಪ್ಸಿನ ಚೂರು
ತುಂಡಾಗಿದ್ರೂ ಇನ್ನೂ ಇರೋ ಹಳೇ ಚಪ್ಲಿ
ಉದ್ದ ಹೆಚ್ಚಾಗಿ ಚುಚ್ಚುತ್ತಾ ಇರೋ ಕಾಲಿನ ಉಗುರು
ಚಾರ್ಜ್ ಆಗ್ದೇ ಇದ್ರೂ ಹಾಗೇ ಇಟ್ಕೊಂಡಿರೋ ಹಳೇ ಚಾರ್ಜರ್
ಗೆರೆ ಬಿದ್ದು ಸ್ಕ್ರಾಚ್ ಆಗಿರೋ ಹೆಲ್ಮೆಟ್ಟಿನ ಗ್ಲಾಸ್
ಒಂದು ಕಿವಿಯಲ್ಲಿ ಮಾತ್ರಾ ಕೇಳಿಸೋ ಹೆಡ್-ಫೋನು
ಎಷ್ಟು ಸಲ ಕೊಡಕಿದರೂ ಬರೀದೇ ಇರೋ ಪೆನ್ನು
ಒಡೆದು ಸೋರ್ತಾ ಇರೋ ಹಳೇ ಬಕೆಟ್
ಕಾಫಿಯಲ್ಲಿ ಸಿಗೋ ಇರುವೆ

ಕೆಲವನ್ನ ತೆಗೆದು ಎಸೆದ ಮೇಲೇ,
ಅದರಿಂದ ಇದುವರೆಗೆ ಅದೆಷ್ಟು ತೊಂದರೆ ಆಗ್ತಿತ್ತು ಅಂತ ಗೊತ್ತಾಗೋದು!

You may also like...

Leave a Reply

Your email address will not be published. Required fields are marked *