ಐರನ್ ಬಾಕ್ಸ್
ದಿನಾಂಕ 22-12-2014 ರ ಪಂಜುವಿನ ಸಂಚಿಕೆಯಲ್ಲಿ http://www.panjumagazine.com/?p=9586
~ ಐರನ್ ಬಾಕ್ಸ್ ~
(ಕಾಲ್ಪನಿಕ)
ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ ‘ಢಬ್’ ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ ನನ್ನ ಫ್ರೆಂಡು ಮುರಳಿ ಅಂತ ಇಬ್ರೂ ಒಟ್ಟಿಗೆ ಇರ್ತಾ ಒಂದು ವರ್ಷದ ಮೇಲಾಗಿತ್ತು. ರಾತ್ರಿ ನಾನು ಹಾಲ್ ನಲ್ಲಿ ಮಲಗಿದ್ರೆ, ಮುರಳಿ ಇನ್ನೊಂದು ಕೋಣೇಲಿ ಮಲಗ್ತಿದ್ದ. ಈಗ ‘ಢಬ್’ ಅಂತ ಶಬ್ದ ಬಂದಿದ್ದು ಅವನು ಮಲಗಿದ್ದ ಕೋಣೆಯಿಂದಾನೆ.
ಇವನಿನ್ನೂ ಮಲಗೇ ಇಲ್ಲ ಅನ್ಕೊಂಡು “ಏನ್ ಬೀಳಿಸಿದ್ಯೋ?” ಅಂದೆ.
ಆದ್ರೆ ಅವನದ್ದೇನೂ ಮಾತೇ ಇಲ್ಲ, ಬದಲಿಗೆ ನೆಲದ ಮೇಲೆ ಬರಿಕೈಯಲ್ಲಿ ಹೊಡೆದ ಹಾಗೆ ಶಬ್ದ ಬರೋಕೆ ಶುರು ಆಯ್ತು. ಸುಮ್ನೆ ಕಿವಿ ಹತ್ರ ಕೂಗೋದು, ಕತ್ತಲಲ್ಲಿ ಹೆದರಿಸೋದು ಮುರಳಿಯ ಇಂಥ ಹಲವು ಕುಚೇಷ್ಟೆಗಳ ಅರಿವಿದ್ದ ನನಗೆ ‘ಇವನದ್ದು ಯಾವಾಗ್ಲೂ ಇದ್ದಿದ್ದೇ’ ಆನ್ಕೊಂಡು ತಿರುಗಿ ಮಲಗೋಕೆ ಹೊರಟವ್ನು ಒಂದು ಸಲ ನೋಡೇ ಬಿಡೋಣ ಅಂತ ಮೊಬೈಲ್ ಟಾರ್ಚ್ ಆನ್ ಮಾಡಿ ಅವನ ರೂಮೊಳಗೆ ನೋಡ್ದೆ. ಮುರಳಿ ಹೊಟ್ಟೆ ಹಿಡ್ಕೊಂಡು ಒದ್ದಾಡ್ತಾ ಬಿದ್ದಿದ್ದ! ಒಂದು ಸಲಕ್ಕೆ ಹೆದರಿಕೆ ಆದ್ರೂ ಹೊಸದೊಂದು ನಾಟಕ ಶುರು ಮಾಡಿದಾನೆ ಅನ್ಕೊಂಡು “ಮತ್ತೆಂತ ಮಾರಾಯ ನಿಂದು?” ಅನ್ನುತ್ತಾ ಕೋಣೆಯ ಲೈಟ್ ಆನ್ ಮಾಡಿದೆ.
ಮುರಳಿ ನಾಟಕ ಮಾಡ್ತಿಲ್ಲ ಅಂತ ಗೊತ್ತಾಗೋಕೆ ಜಾಸ್ತಿ ಹೊತ್ತು ಹಿಡೀಲಿಲ್ಲ. ಅವನ ಪಕ್ಕದಲ್ಲೇ ನಮ್ಮ ಮನೇಲಿರೋ ಏನಿಲ್ಲಾ ಅಂದ್ರೂ ಐದರಿಂದ ಆರು ಕೆ.ಜಿ. ತೂಕವಿರೋ ಹಳೆಯ ಐರನ್ ಬಾಕ್ಸ್ ಬಿದ್ದಿತ್ತು. ಇವತ್ತು ರೂಮನ್ನೆಲ್ಲಾ ಕ್ಲೀನ್ ಮಾಡಿದವನು ನಾನೇ ಅದನ್ನು ತೆಗೆದು ಸ್ಲ್ಯಾಬ್ ನ ಮೇಲಿಟ್ಟಿದ್ದೆ. ತುಂಬಾ ತುದಿಯಲ್ಲಿ ಇಟ್ಟಿದ್ರಿಂದ ಅದು ಹೇಗೋ ಬ್ಯಾಲೆನ್ಸ್ ತಪ್ಪಿ ಮಲಗಿದ್ದ ಮುರಳಿಯ ಹೊಟ್ಟೆಯಮೇಲೆ ಬಿದ್ದಿತ್ತು!
‘ಗಂಡಸರು ಯಾವಾಗ್ಲೂ ಧೈರ್ಯವಾಗಿರಬೇಕು, ಏನೇ ಆದರೂ ಎದೆಗುಂದಬಾರದು, ಅಳಬಾರದು’ ಅನ್ನೋ ಸಮಾಜದ ಮಧ್ಯೆ ಬೆಳೆದಿದ್ದ ನನಗೆ, ಯಾರೋ ಅಪರಿಚಿತನಾದ ನನ್ನೆದುರಿಗೆ ಅವರು ಅಳುವುದು ವಿಚಿತ್ರವಾಗಿ ಕಂಡಿದ್ದು ಆಶ್ಚರ್ಯವಲ್ಲ!
ಆದರೂ ಅವರ ಕಷ್ಟ ಕೇಳಿ ಅದರ ಮುಂದೆ ನನ್ನ ಕಷ್ಟ ಯಾವ ಲೆಕ್ಕ ಅನಿಸಿದ್ದು ಸುಳ್ಳಲ್ಲ!
ಅಷ್ಟರಲ್ಲಿ ಅವರೇ ಮತ್ತೆ “ಇವಳಿಗೆ ಮ್ಯಾತ್ಸ್ ಸರಿಯಾಗಿ ಬರೋಲ್ಲ ಅಂತ ಇವರ ಫ್ರೆಂಡ್ಸ್ ಅಲ್ಲಿ ಅದ್ಯಾರು, ಏನು ಹೇಳಿದ್ರೋ ಗೊತ್ತಿಲ್ಲ. ಅದನ್ನೇ ಮನಸಿಗೆ ಹಚ್ಚಿಕೊಂಡು ಈ ಥರ ಮಾಡ್ಕೊಂಡು ಬಿಟ್ಟಿದಾಳೆ ನೋಡಿ” ಅನ್ನುತ್ತಾ ಅಳೋಕೆ ಶುರು ಮಾಡಿ ಬಿಟ್ರು!
‘ಗಂಡಸರು ಯಾವಾಗ್ಲೂ ಧೈರ್ಯವಾಗಿರಬೇಕು, ಏನೇ ಆದರೂ ಎದೆಗುಂದಬಾರದು, ಅಳಬಾರದು’ ಅನ್ನೋ ಸಮಾಜದ ಮಧ್ಯೆ ಬೆಳೆದಿದ್ದ ನನಗೆ, ಯಾರೋ ಅಪರಿಚಿತನಾದ ನನ್ನೆದುರಿಗೆ ಅವರು ಅಳುವುದು ವಿಚಿತ್ರವಾಗಿ ಕಂಡಿದ್ದು ಆಶ್ಚರ್ಯವಲ್ಲ! ಬಹುಷಃ ಇದನ್ನೆಲ್ಲಾ ಅವರು ಯಾರೋ ಒಬ್ಬರ ಹತ್ತಿರ ಹೇಳಿಕೊಳ್ಳಬೇಕಾಗಿತ್ತೇನೋ! ಆದರೂ ಅವರ ಕಷ್ಟ ಕೇಳಿ ಅದರ ಮುಂದೆ ನನ್ನ ಕಷ್ಟ ಯಾವ ಲೆಕ್ಕ ಅನಿಸಿದ್ದು ಸುಳ್ಳಲ್ಲ!
ಅವರನ್ನು ಯಾವ ರೀತಿ ಸಮಾಧಾನ ಮಾಡಬೇಕು ಅನ್ನೋದು ಗೊತ್ತಾಗದೇ, “ಬನ್ನಿ, ಒಂದು ಲೋಟ ಕಾಫಿ ಕುಡಿದು ಬರೋಣ” ಅಂದೆ! ಅಲ್ಲೇ ಇದ್ದ ಆಸ್ಪತೆಯ ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಬಂದು ಕುರ್ಚಿಯಲ್ಲಿ ಕೂರುತ್ತಿದ್ದೆವಷ್ಟೇ, ಅಷ್ಟರಲ್ಲಿ ಒಬ್ಬ ನರ್ಸ್ ಬಂದು “ಮುರಳಿಯವರ ಕಡೆಯವರು ಯಾರು ಇಲ್ಲಿ?” ಅಂದ್ರು.
ನಾನು ಎದ್ದು ನಿಂತೆ.
“ಪೇಶೆಂಟನ್ನು ಸ್ಪೆಶಲ್ ವಾರ್ಡಿಗೆ ಶಿಫ್ಟ್ ಮಾಡಿದಾರೆ. ನೀವು ಬಂದು ನೋಡಬಹುದು” ಅಂದ್ರು.
ನನ್ನ ಹೊಸ ಸ್ನೇಹಿತನಿಗೆ ‘ಬರ್ತೀನಿ’ ಅಂದು ನರ್ಸ್ ಹಿಂದೆಯೇ ಮುರಳಿಯಿದ್ದ ಕೋಣೆಗೆ ಹೋದೆ. ಮುರಳಿ ಎಚ್ಚರವಾಗಿ ಕಣ್ಣು ತೆರೆದು ಮಲಗಿದ್ದ!
“ಹೇಗಿದ್ಯೋ?!” ಅಂದೆ.
“ನೋವಿನ್ನೂ ಇದೆ. ಆಗ ಇದ್ದಷ್ಟು ಇಲ್ಲ” ಅಂದ.
“ಸಾರಿ ಕಣಾ! ಇದಕ್ಕೆಲ್ಲಾ ನಾನೇ ಕಾರಣ. ಆ ಐರನ್ ಬಾಕ್ಸನ್ನ ನಾನು ಕರೆಕ್ಟಾಗಿ ಇಡಬೇಕಿತ್ತು, ಅದು ಹೇಗೆ ಬಿತ್ತು ಅಂತಾನೆ ಗೊತ್ತಿಲ್ಲ ಮಾರಾಯ” ಅಂದೆ.
“ನಂಗೆ ಗೊತ್ತು ಹೇಗೆ ಬಿದ್ದಿದ್ದು ಅಂತ!”
“ಹೆಂಗೆ?!!”
“ನೀನು ಇವತ್ತು ಹೊಸಾ ಶರ್ಟ್ ತಗೊಂಡು ಬಂದ್ಯಲಾ? ಅದು ಅಲ್ಲೇ ನೆಲದ ಮೇಲೆ ಬಿದ್ದಿತ್ತು. ನಿನಗೆ ಸಿಗದೇ ರೂಮೆಲ್ಲಾ ಹುಡುಕಬೇಕು ಅಂತ ಮಲ್ಕೊಂಡಲ್ಲೇ ಅದನ್ನ ತೆಗೆದು ಸ್ಲ್ಯಾಬ್ ಮೇಲೆ ಹಾಕೋಕೆ ಹೋದೆ. ವಾಪಸ್ ಬಂತು, ಬರೀ ಶರ್ಟ್ ಅನ್ಕೊಂಡೆ, ಜೊತೆಗೆ ಐರನ್ ಬಾಕ್ಸೂ ಇದೆ ಅಂತ ಯಾವನಿಗ್ ಗೊತ್ತಿತ್ತು?” ಅಂದ.
“ಲೋಪರ್! ಸುಮ್ನೇ ನನ್ನಿಂದಾ ಹಿಂಗಾಯ್ತು ಅನ್ಕೊಂಡಿದ್ನಲ್ಲೋ. ಸಾಯಿ ಮಗನೆ! ನಿಂಗೆ ಹೀಗಾಗೋಕೆ ನೀನೆ ಕಾರಣ” ಅಂದೆ.
ನಗುತ್ತಾ “ಐರನ್ ಬಾಕ್ಸ್ ಮೈ ಮೇಲೆ ಬೀಳ್ಸ್ಕೊಂಡಿದೀನಪ್ಪಾ! ಇನ್ಮೇಲೆ ‘ಐರನ್ ಮ್ಯಾನ್’ ಅಂತ ಕರೀ ನನ್ನನ್ನ” ಅಂದ.
*-_-*
Listen to the Audio Version of this blogpost 🙂
supr nice writing.. u enjoyed lots all the u r all rounder u have a great future 👍👍👌
Thank you 🙂