Facebook ಒಳ್ಳೆಯದೋ? ಕೆಟ್ಟದ್ದೋ?!

nanmansu
Facebook ಗೆ ADDICT ಆದವರು ಏನ್ ಮಾಡ್ತಾರೆ ?!!
“ಹೇಯ್ ಮಗಾ ಅವತ್ತು ರಾಕೇಶ್ ಹತ್ರ ಮಾತಾಡ್ದೆ ಕಣೋ! ಡೆಲ್ಲಿಲಿ ಇದಾನಂತೆ ಈಗ.”
“ಅವ್ನ mobile number ಹೆಂಗೋ ಸಿಕ್ತು ನಿಂಗೆ?”
“Facebook ಅಲ್ಲಿ ಇದಾನೆ ಮಗಾ! ಹೇಗ್ ಆಗಿದಾನೆ ಗೊತ್ತ ಈಗ? ನನ್ profile ಅಲ್ಲಿ ಇದಾನೆ ನೋಡು”
“ಏನ್ ಗೊತ್ತ? ನಿನ್ನೆ ನಾನು ಪ್ರವೀಣ್ ಜೊತೆ coffee dayಗೆ ಹೋಗಿದ್ದೆ, ಎಷ್ಟು ಒಳ್ಳೆಯವನು ಗೊತ್ತ ಅವ್ನು? ತುಂಬಾ care ಮಾಡ್ತಾನೆ ಕಣೆ”
“ಹೌದ? ಅಲ್ವೇ ಈ ಪ್ರವೀಣ್ ಯಾರು?”
“ಹೋ! ನಿಂಗೆ ಹೇಳಕ್ಕೆ ಮರ್ತೋಗಿದೆ ನೋಡು. ಅವ್ನು Facebook ಅಲ್ಲಿ friend ಆಗಿದ್ದು ಕಣೆ. ಅವ್ನೆ ಅವತ್ತೊಂದಿನ request ಕಳ್ಸಿದ್ದ, accept ಮಾಡಿದ್ದೆ. ಹಿಂಗೆ chat ಮಾಡ್ತಾ ಫ್ರೆಂಡ್ ಆದ ಕಣೆ”
“Congrats ಬಾಸ್… Sorry ಕಣೋ! ನಿನ್ ಮದ್ವೆಗೆ ಬರೋಕ್ ಆಗ್ಲೇ ಇಲ್ಲ. facebook ಅಲ್ಲಿ photos ಎಲ್ಲ ನೋಡ್ದೆ. ಒಳ್ಳೆ ಜೋಡಿ ನಿಮ್ಮಿಬ್ರುದ್ದು”
ಇವತ್ತು facebook ಬಗ್ಗೆ ಈ ಥರ ಮಾತಾಡದೆ ಇರುವವವರೇ ಇಲ್ಲ ಅನ್ಸುತ್ತೆ.
ಇಂದಿನ ಯುವ ಜನಾಂಗಕ್ಕೆ facebook ಅಂದರೆ ಏನು ಅಂತ ಹೇಳುವ ಅಗತ್ಯ ಇಲ್ಲ. ಏಕೆಂದರೆ ಅದು ನಮ್ಮೆಲ್ಲರ ಜೀವನದ ಒಂದು ಭಾಗವೇನೋ ಎಂಬಷ್ಟು ಅದಕ್ಕೆ addict ಆಗಿಬಿಟ್ಟಿದ್ದೇವೆ.

ಎಲ್ಲರ “ನಾನು ಹೀಗಿದೀನಿ ಅಂತ ಇಡೀ ಜಗತ್ತಿಗೇ ಹೇಳ್ಕೋಬೇಕು” ಅನ್ನೋ ಆಸೆಯನ್ನ ಅತಿ ಸುಲಭವಾಗಿ ಈಡೇರಿಸಿದ್ದು ಈ Facebook .
ಯಾವುದೇ ಒಂದು ವಿಷಯ ಬಹಳ ಪ್ರಸಿದ್ಧಿ ಆದಾಗ ಅದರ ಬಗ್ಗೆ ಖಂಡಿತ ಚರ್ಚೆ ಆರಂಭ ಆಗುತ್ತೆ.
ಅದೇ ರೀತಿಯಲ್ಲಿ, Facebook ಒಳ್ಳೆಯದೋ? ಕೆಟ್ಟದ್ದೋ?!!
ಈ ಪ್ರಶ್ನೆ ನನಗೆ ಬಹಳ ದಿನದಿಂದ ಕಾಡುತಿದ್ದು, ಉತ್ತರಕ್ಕಾಗಿ ಚರ್ಚಾಸ್ಪರ್ಧೆಯಲ್ಲಿ ‘ಪರ’ ‘ವಿರೋಧ’ ಗಳ ಚರ್ಚೆಯಂತೆ ನನ್ನೊಳಗೇ ಮಾತುಕತೆ ನಡೆಯುತ್ತಲೇ ಇದೆ!
ಹೆಚ್ಚಿನವರು “ಎಲ್ಲರು ಅದ್ರ ಬಗ್ಗೆನೆ ಮಾತಾಡ್ತಾರೆ. ನಾನು ಯಾಕೆ facebook account create ಮಾಡಬಾರದು” ಅಂತ ಅನ್ಕೊಂಡೆ ಈ facebook ಅಭಿಯಾನ(!) ಆರಂಭ ಮಾಡೋದು.
ಅದರ ಒಂದೊಂದೇ ಆಯ್ಕೆ(options) ಗಳನ್ನು ಕಲಿಯುತ್ತ ಕಲಿಯುತ್ತ ಸಣ್ಣ ಮಕ್ಕಳಿಗೆ ಕಾರ್ಟೂನ್ ಇಷ್ಟ ಆಗೋ ಥರ ನಮಗೂ facebook ಇಷ್ಟ ಆಗಿ ಬಿಡುತ್ತೆ.
ಎಲ್ರೂ ಮೊದ್ಲು ಮಾಡೋದ್ ಅಂದ್ರೆ Decent ಆಗ್ ಇರೋ ಒಂದು profile picture ಹಾಕೋದು. ಆ pictureಗೆ ಈಗಾಗ್ಲೇ facebook ಅಲ್ಲಿ ಪಳಗಿರೋ ಹಳೆ friends ಎಲ್ಲ ‘like’ ಅಂತ ಇರೋ ಒಂದು button ಒತ್ತಿರ್ತಾರೆ ಇನ್ನು ಸ್ವಲ್ಪ ಜನ “nice pic” ಅಂತ comment ಕೂಡ ಮಾಡಿರ್ತಾರೆ. ನಮಗೋ ಖುಷಿನೋ ಖುಷಿ, ನನ್ನ ಫೋಟೋ ಎಲ್ಲರಿಗು ತುಂಬಾ ಇಷ್ಟ ಆಗ್ಬಿಡ್ತು ಅಂತ.
ಸರಿ! ಯಾರ್ ಯಾರು comment ಮಾಡಿರ್ತರೋ ಅವ್ರ profile open ಮಾಡಿ ನಾವೂ ಒಂದೆರಡು ‘like,comment’ ಮಾಡ್ತೀವಿ.
ಸ್ವಲ್ಪ ದಿನ ಆದ್ಮೇಲೆ ಫ್ರೆಂಡ್ಸ್ ಎಲ್ಲ ಸೇರಿ trip ಹೋಗಿದ್ದ photos ಎಲ್ಲ upload ಮಾಡ್ತಿವಿ.
ಅಬ್ಬಬ್ಬ! ಅದೇನ್ ‘like’ ಗಳು, ‘comment’ ಗಳು. ಎಷ್ಟೋ ಜನ facebook ಅಲ್ಲಿ ಹಾಕ್ಬೇಕು ಅಂತಾನೆ ಬೇರೆ ಬೇರೆ ಥರ photos ತೆಗೀತಾರೆ.
ಅಲ್ಲೇ side ಅಲ್ಲಿ “Suggestions” ಅಂತ ನಮ್ಮ ಹಳೆ ಫ್ರೆಂಡ್ ಇರ್ತಾರೆ. Facebook ನಿಮ್ಮ friendsಗೆ, friends ಆಗಿರೋ ಬೇರೆ ಫ್ರೆಂಡ್ಸ್ ಅನ್ನು suggest ಮಾಡತ್ತೆ! ಅವ್ರಿಗೆ ರಿಕ್ವೆಸ್ಟ್ ಕಳ್ಸಿ, chat ಮಾಡಿ, ಮತ್ತೆ ಸಿಕ್ಕಿದ ಆನಂದ! 
ಹಳೆ ಸ್ಕೂಲ್ದೋ, ಕಾಲೇಜ್ದೋ ಒಂದು Group ಇರುತ್ತೆ. ಅದ್ರಲ್ಲಿ ಎಷ್ಟೊಂದ್ ಜನ ಹಳೆ ಸ್ಕೂಲ್, ಕಾಲೇಜ್ ಫ್ರೆಂಡ್ಸ್ ಭೇಟಿ ಆಗತ್ತೆ.
Time pass ಮಾಡಕ್ಕೆ ಎಷ್ಟೊಂದ್ ಗೇಮ್ ಗಳು, ಹೊಸ ಹೊಸ applications ಗಳು ಎಲ್ಲ ಇರುತ್ತೆ. ಟೈಮ್ ಹೋಗೋದೇ ಗೊತ್ತಾಗಲ್ಲ.
ಆದ್ರೆ ಇಡೀ ದಿನ Facebook ಓಪನ್ ಮಾಡ್ಕೊಂಡೆ ಇದ್ರೋ? ನೀವ್ ಕೆಟ್ರಿ! ಎಲ್ಲ ಕಾಲಕ್ಕೂ ಅನ್ವಯಿಸುವ “ಅತಿ ಆದ್ರೆ ಅಮ್ರುತನೂ  ವಿಷ” ಅನ್ನ್ನೋ ಗಾದೆಯನ್ನ ಇಲ್ಲೂ ಉಪಯೋಗಿಸಬೇಕಾಗತ್ತೆ!
“ಇತ್ತೀಚೆಗೆ ಜೀವನ ಬಹಳ complicate ಆಗ್ತಾ ಇದೆ”, “Worst days of my life”, “I just want to be left alone   “.
ಇವೆಲ್ಲ ಒಬ್ರು ಇನ್ನೊಬ್ರ ಹತ್ರ ಮಾತಡ್ತಿರೋದಲ್ಲ! ಒಂದು ಸಲ ನಿಮ್ಮ Facebook account open ಮಾಡಿ ನೋಡಿದ್ರೆ ದಿನಕ್ಕೆ 5 – 6 ಜನ ಆದ್ರು ಇದೆ ಥರ Status update ಮಾಡಿರ್ತಾರೆ.
ಮೊದಲಿಗೆ ಎಲ್ಲವೂ ಚೆನ್ನಾಗಿ ಕಾಣುವ Facebook ಅದರಲ್ಲಿರುವ ಎಲ್ಲ options ಗಳನ್ನು ತಿಳಿದುಕೊಂಡ ಮೇಲೆ ಅಷ್ಟು ರುಚಿಸುವುದಿಲ್ಲ. ಯಾರೋ ಒಬ್ರು ಕರುಣೆ ತೋರಿಸಲಿ ಅಂತ, Facebook ಅಲ್ಲಿ ಯಾರೋ ಗೊತ್ತಿಲ್ದೇ ಇರುವವರು ಮಾಡೋ comment ಗೋಸ್ಕರ ನಮ್ಮ ಕಷ್ಟಗಳನ್ನೆಲ್ಲ ಎಲ್ಲರಿಗೂ ಕಾಣೋ ಥರ ಹೇಳಬೇಕಾ? 
ಇತ್ತೀಚೆಗೆ ದಿನ ಪತ್ರಿಕೆಯಲ್ಲಿ ಓದಿದ ನೆನೆಪು. ಒಂದು ಹುಡುಗಿಯ ಸ್ನೇಹಿತ Facebook ಅಲ್ಲಿ ಬೇರೆ ಎಲ್ಲರ ಜೊತೆ ಮಾತಾಡ್ತಾನೆ, photos ಎಲ್ಲ update ಮಾಡ್ತಾನೆ ಆದರೆ ಇವಳ ಹತ್ತಿರ ಮಾತಾಡ್ತಿಲ್ಲ, chat ಮಾಡ್ತಿಲ್ಲ, ತನ್ನಿಂದ ದೂರ ಹೋಗ್ತಾ ಇದಾನೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ !! ಅಂದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಅಲ್ಲ, ಆದರೆ Facebook ಇಂದ ಕೆಲವರ Mood OFF ಆಗೋದಂತೂ ಸತ್ಯ! Account De-activate ಮಾಡಿರುವವರೂ ಕಡಿಮೆ ಇಲ್ಲ!  
ಈಗಾಗಲೇ ಒಂದು ಗಾಳಿ ಸುದ್ದಿ ಹರಡಿದೆ ಸ್ವತಃ Facebook ನ ಸಂಸ್ಥಾಪಕ Mark Zukerberg , ಈ company ಯಲ್ಲಿ ಮಾನಸಿಕ ಒತ್ತಡವನ್ನು ತಡೆಯಲು ಆಗುತ್ತಿಲ್ಲ, Facebook ಅನ್ನು ಮಾರ್ಚ್ 15 2012 ಕ್ಕೆ ಬಂದ್ ಮಾಡುತ್ತಿದ್ದೇವೆ ಅಂತ ಹೇಳಿದ್ದಾನೆ!! ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ!!
ಏನೇ ಆದರೂ ನಮ್ಮ ಈ modern ಯುಗದ ವಿಸ್ಮಯ(!) Facebook ನಿಂದ ಎಷ್ಟೋ ಖುಷಿಯನ್ನು ಅನುಭವಿಸಿರುವ ನಾವು ಅದರಲ್ಲಿ ಕೇವಲ ನಮ್ಮ ಖುಷಿಯನ್ನೇ ಹಂಚಿಕೊಂಡರೆ ಎಲ್ಲರೂ ಖುಶಿಯಾಗಿರಬಹುದು ಎಂದು ಖುಷಿಯಿಂದ ಹೇಳುತ್ತಿದ್ದೇನೆ.
Log out ಮಾಡೋ ಮುಂಚೆ, ದಿನ Facebook page ನ  ಮೇಲೆ ಕೆಳಗೆ, ಕೆಳಗೆ ಮೇಲೆ Scroll ಮಾಡೋ ಥರ ಈ ಲೇಖನವನ್ನೂ ಓದಿ, ಚೆನ್ನಾಗಿದ್ರೆ “Like ” ಮಾಡಿ, ಇಷ್ಟ ಆದ್ರೆ “Comment ” ಮಾಡಿ, ಸಿಟ್ಟು ಬಂದ್ರೆ ಬೈದುಬಿಡಿ !!

You may also like...

Leave a Reply

Your email address will not be published. Required fields are marked *